ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಕೆಂಗಲ್ಲು ಆಂಜನೇಯ ಕೆಂಗಲ್ಲ ಹನುಮಂತರಾಯ ನಮ್ಮ ರಂಗನಾಥಗೆ ಬಹು ಪ್ರಿಯ ಪ ಮಂಗಳಕರ ವಜ್ರಕಾಯ ಉ ತ್ತುಂಗ ವಿಕ್ರಮ ಪೊರೆ ಜೀಯ ಅ.ಪ ಶ್ರಾವಣ ಕಡೆ ಶನಿವಾರ ಬರೆ ಭಾವಿಸಿ ಭಕ್ತರು ಸೇರೆ ಆವಾವೆಡೆ ಜನ ಮೀರೆ ನಿನ್ನ ತೀವಿದ ಮನದಿ ಪಾಡುವರೊ ದೊರೆ 1 ಬಹುಭಜಕರು ಕುಣಿದಾಡಿ ಗುಣ ಸಾಹಸ್ರಗಳ ಕೊಂಡಾಡೀ ಶ್ರೀಹರಿ ವೈಭವ ನೋಡೀ ಮಹದಾನಂದದೊಳಗೋಲಾಡಿ2 ಪರಿ ವ್ಯಾದಗಳಿಂದ ಸಿರಿ ವರನುತ್ಸವ ಬಹುಚಂದ ತಿರುಪತಿ ಯಾತ್ರಿಕರಿಂದ ನೆರೆದೆಸೆವ ಕಲ್ಯಾಣ ಬೃಂದ 3 ತಾಳ ತಂಬೂರಿ ಮದ್ದಳೆಯ ಮೇಳ ತಮ್ಮಟೆಗಳ ಬಹು ಘೋಷ ಭೂಲೋಕದಿಂ ಸ್ವರ್ಗಕೈದಿ ಶ್ರೀ ಲೀಲೆಯ ತೋರ್ಪುದು ನಿಜದಿ 4 ವರಜಾಜಿ ಕೇಶವನ ನಾಮವನು ನಿರುತ ನೆನೆವ ಶರಣ ಪ್ರೇಮ ಕರುಣದಿ ಪೊರೆ ಪುಣ್ಯಧಾಮ ಸಿರಿ ಜಯಚಾಮನೃಪಸ್ತುತ್ಯ ಭೀಮ 5
--------------
ಶಾಮಶರ್ಮರು
ಎಲ್ಲಿ ಪೋದ ಶಿರಿನಲ್ಲತಾ ನೆಲ್ಲಿ ಪೋದ ಶಿರಿನಲ್ಲ ಪ ಎಲ್ಲಿ ಪೋದ ಪದಪಲ್ಲವಭಜಿಪರ ನಲ್ಲೆ ಬಿಟ್ಟು ಪರನಲ್ಲೇರಿಗೊಲಿದು ತಾ ಅ.ಪ ಸತಿ ಸುತ ಮುನಿಕಿಂತತಿಹಿತ ಪ್ರೀಯರು ಮತಿವಂತರೆ ಎನಗತಿ ಎಂಬುವ ತಾ 1 ಸಕಲಭಾಗ್ಯ ಪರಸುಖವೆಂಬುವ ತಾ 2 ಕಟ್ಟು ಕಾವಲಿ ಪರರಟ್ಟುಳಿ ಇಲ್ಲವೊ ಬಿಟ್ಟರೆ ಭಕುತರು ಕಟ್ಟೋರು ಎಂಬುವ 3 ಎಲ್ಲಿರಿಗತಿ ನಾ ಬಲ್ಲಿದ ಎನಪಾದ ಪಲ್ಲವ ಭಜಕರು ಬಲ್ಲಿದರೆಂಬುವ 4 ದಾತಗುರು ಜಗನ್ನಾಥವಿಠಲ ನೀ ರೀತಿಯ ಪೇಳಿದ ದೂತ ಪಾಲಕ ತಾ 5
--------------
ಗುರುಜಗನ್ನಾಥದಾಸರು
ತೀರ್ಥವು ಬೇಡಾ ಕ್ಷೇತ್ರವು ಬೇಡಾ ಜಪ ತಪ ಯೋಗವು ಬೇಡಾ ಪ ಪರ ಉಪಕಾರ ಶಾಸ್ತ್ರ ಪುರಾಣಗಳು ಬೇಡಾ | ಸ್ವಾಮಿ ಸದ್ಗುರು ಭವತಾರಕನ ಭಜಕರ ಪಾದವ ನೀ ಬಿಡಬೇಡಾ 1 ಸತ್ಯವು ಸಂಸಾರವು ಜಗವಿದು ಮಾಡೆಂಬರು ನೋಡೀಜನರು | ಮಿಥ್ಯವು ಸರ್ವವು ಜಗದೀಶನನು ತಿಳಿಯೆಂಬುವರಾ ಸಜ್ಜನರು || ಜಾಗ್ರದಿ ಸ್ವಪ್ನದಿ ಬಳಲುತ ನಲಿವುತ ಚರಿಸುವರಾ ಕಾರ್ಮಿಕರು | ತುರ್ಯಾವಸ್ಥೆಯೋಳ್ ಮರೆದು ತಮ್ಮನು ಇರುತಿಹರಾ ಸಾಧುವರು2 ಸಾರ ನಿವೃತ್ತಿಯ ಅರಿವುದೆ ಜೀವನ್ಮುಕ್ತಿ || ಇದರ ಹಂಚಿಕೆ ಮಾಡುತ್ತಿಹುದೇ ಅದುವೆ ಶಾಸ್ತ್ರದ ಯುಕುತೀ | ಸದಮಲ ಬೋಧಾನಂದವೆ ಬಲಿದರೆ ನಿಜವೇ ತಾ ಅವ್ಯಕ್ತಿ 3 ಅನುದಿನ ಮೂರ್ತಿ ಭವತಾರಕ ಭಜಕರ ಕೇಳೋ ನಿನ್ನ ಖೂನಾ 4 ಸಂಸಾರವ ಸದ್ಧರ್ಮದಲಿ ಸಾಧು ಸಂತರಂತೆ ನೀ ಮಾಡೊ | ಸಂಶಯವಳಿದು ಸರ್ವವು ಶಿವನೆಂದರಿದು ಅವರೊಳು ಕೂಡೊ | ಸತ್ತು ಹುಟ್ಟುವ ಕಟ್ಟಳೆಗಳನು ಕಿತ್ತಿ ಈಡ್ಯಾಡೊ | ನಿತ್ಯದಿ ಭವತಾರಕನ ಭಜಕರ ಸಂಗದಲಿ ಲೋಲ್ಯಾಡೊ 5 ಗುರು ವರನಲಿ ಸತ್ಪುರುಷರ ಬಳಿಯಲಿ ಅರಸಬಾರದು ಇಷ್ಟಾ | ಕುಲ ವಯ ಕ್ರಿಯಾ ಕರ್ಮವ ತಾಪತ್ರಯಗಳನೆಣಿಸುವ ಭ್ರಷ್ಟಾ | ಅನುಭವ ಜ್ಞಾನದಿ ಬೋಧದಿ ಲಕ್ಷ್ಯವೀಕ್ಷಿಸುವವನೆ ಶ್ರೇಷ್ಠಾ | ಇನಿತನು ಬಿಟ್ಟು ನಿಂದಿಸುವವನೆ ಭವದಲಿ ಬಡುವನು ಕಷ್ಟಾ 6 ಮೂರ್ತಿ ಭವತಾರಕ ಭಜಕರ ಸೂರ್ಯನ ಬಲ್ಲದೆ ಗೂಗಿ 7 ಭವ ದೋಷವು ಅಳಿವಹುದೇ? | ಗುರು ಭವತಾರಕ ಭಜಕರ ಬೋಧವು ಧರೆಯೊಳು ನರರಿಗೆ ಇಹುದೇ ? 8 ಮಾತು ಸತ್ಯವಾದರೆ ಆತಗೆ ಶಿವನೆನು- ತಿಹರೀ ಜಗ ಜನರೂ | ಭೂತಭವಿಷ್ಯತ್ ಹೇಳಲು ಭಕ್ತಿಯೊಳಾತಗೆ ನಡಕೊಂಬುವರೂ | ಭೂತಳದೊಳು ಭವತಾರಕ ಭಕ್ತರ ನೀತಿ ಮರೆತ ಪಾಮರರೂ | ನೂತನ ಖ್ಯಾತಿಯ ಕೊಂಡಾಡುತ ಬಹು ಪಾತಕಕೆಳಿ ಎಂಬುವರೂ 9 ಕರ ಭವ ಮೂರ್ತಿ ಭವತಾರಕ ಭಜಕರು ಇದ್ದ ಸ್ಥಿತಿಯನರಿಯರು 10 ಆಡುವರಾಟವ ಬಾಲರ ಮನೆಯಲಿ ಮಾಡುತ ಬ್ರಹ್ಮಾಂಡವನೂ |ನೋಡರು ಹಿರಿಯರು ಸಟೆಯೆಂದೇ ದಿಟ ಮಾಡುವರಿಹದಾಟವನೂ | ಪಾಡಲ್ಲೆನುತಲಿ ತಿಳಿದವರೊಳು ಬೇಡುವರಾ ನಾಕವನೂ | ರೂಢಿಯೊಳಗೆ ಭವತಾರಕ ಭಜಕರು ನೋಡರು ಪುಸಿಯೆಂದದನೂ 11 ನಿತ್ಯ ಪೂರ್ಣ ಭವತಾರಕನಂಘ್ರಿಯ ಹೊಂದದೆ ತಿಳಿಯದು ಗುಟ್ಟೂ 12 ಸಂಚಿತ ಪ್ರಾರಬ್ಧ ಕ್ರಿಯಮಾಣಾ ಜನರಿಗೆ ಬರೆದನು ಬ್ರಹ್ಮಾ | ಮುಂಚೆ ಶಿರವನು ನೀಗಿದಾ ಬರದವರಾರೊ ಆತಗೆ ತಮ್ಮಾ | ಮಿಂಚಿನಂತೆ ಜೀವನಕೆ ತಗಲುವಾ ಮಾಡುವ ಕರ್ಮಾ ಧರ್ಮಾ | ಹಂಚಿಕೆ ತಿಳಿಯದೆ ನುಡಿವರು ಮರುಳರು ವಂಚನೆ ಬಿಡು ಇದು ವರ್ಮಾ 13 ದೇವ ನೈವೇದ್ಯವು ಖೊಬ್ಬರಿ ಸಕ್ಕರಿ ಪನಿವಾರವು ನೋಡಿ | ಆವ ಕುಲದವನಾದರೂ ಏನು | ಇಲ್ಲದ ಹಂಚಿಕೆ ಮಾಡೀ ಭಾವಿಸಿ ಮೃಷ್ಟಾನ್ನವನಿಟ್ಟರೂ ಕುಲಧರ್ಮದಲ್ಲಿ ನೋಡೀ | ಕೇವಲ ಭವತಾರಕನ ಭಜಕರ ಮುಂದೆ ರಹಸ್ಯವ ಮಾಡೀ 14
--------------
ಭಾವತರಕರು
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ. ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1 ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ || (ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2 ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3
--------------
ಮೋಹನದಾಸರು
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ಬರಲಾರೆ ಹರಿ ಭಜಕರು ಕರಿಯಲಿ ಪ ಹದಿನಾರು ಸಾವಿರ ಚದುರಿಯರ ಸಂಗವು ಪದುಮಾಕ್ಷ ಸಾಲದೆ ಭಾರ್ಗವಿಲೋಲನಾಗಿ 1 ಗೊಲ್ಲರ ಮನೆಪೊಕ್ಕು ನೆಲವಿಗೇರಿರಲು ಕಳ್ಳನುಯಂದು ಕೈ ಬಿಡಹೋಗೆ 2 ವರ ಹೆನ್ನೆಪುರ ನರಹರಿ ಕರುಣಾಕರ ವಾಸವ ಬಿಟ್ಟು 3
--------------
ಹೆನ್ನೆರಂಗದಾಸರು
ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ | ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ1 ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ | ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ 2 ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ | ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ 3
--------------
ಭಾವತರಕರು
ಹರಕೆಯ ಮಾಡಿಕೊಳ್ಳೀ ಕೇಶವನಿಗೆ ಹರಕೆಯ ಕಟ್ಟಿಕೊಳ್ಳೀ ಪ ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ. ಭಜನೆಯ ಮಾಳ್ಪೆನೆಂದೂ ಕೇಶವನಿಗೆ ಭಜನೆಯರ್ಪಿಸುವೆನೆಂದೂ ಅಜಪಿತ ಶ್ರೀಹರಿದಾತನಾಗಿರುವಾಗ ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1 ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ ಸ್ಮರಣೆಯರ್ಪಿಸುವೆನೆಂದೂ ನಿತ್ಯ ತೃಪ್ತನುಯಿರೆ ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2 ಸೇವೆಯ ಮಾಳ್ಪೆನೆಂದು ಕೇಶವನಿಗೆ ಸೇವೆಯರ್ಪಿಸುವೆನೆಂದೂ ಭಾವಜನಯ್ಯನೆ ತ್ರಿಜಗಪಾಲಕನಾಗಿ ದೇವತಾನಿರುತಿರೆ ಭವಭಯವ್ಯಾಕೇ 3 ವಂದನೆ ಮಾಳ್ಪೆನೆಂದು ಕೇಶವನಿಗೆ ವಂದನೆ ಕೊಡುವೆನೆಂದೂ ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ ಅಂದದಿ ಕೊಡುವ ದಾನಗಳವಾಗ್ಯಾಕೇ 4 ಆತ್ಮವ ಕೊಡುವೆನೆಂದೂ ಕೇಶವನಿಗೆ ಅತ್ಮವರ್ಪಿಸುವೆನೆಂದೂ ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5
--------------
ಕರ್ಕಿ ಕೇಶವದಾಸ