ಭಾಗವತರ ಭಾಗ್ಯೋದಯ
ಭೋಗಿಶಯನ ಭಜಕ ಪ್ರಿಯ ಪ
ಪಾಲಸಾಗರ ಕನ್ಯಾರಮಣ
ನೀಲಶ್ಯಾಮ ಲೋಲಗಾನ
ಕಾಳಿಮರ್ದನ ಕಾಲಹರಣ
ಪಾಲಬಾಲೆ ಶೀಲಮಾನ 1
ಮೂರುಲೋಕ ಸೂತ್ರಧಾರಿ
ವಿನುತ ಶೌರಿ
ವಾರಿಧಿಮಥನ ಮುರಸಂಹಾರಿ
ಧಾರಿಣಿ ಪಾಲಿಪ ದಶಾವಾತಾರಿ2
ಶೂಲಪಾಣಿಸಖ ಸುನಾಮ
ಮಾಲಕೌಸ್ತುಭ ಸತ್ಯಭಾಮಾ
ಲೋಲ ಭಜಕರಘ ನಿರ್ನಾಮ
ಮೇಲುಮಂದಿರ ಶ್ರೀರಾಮ ನಮೋ 3