ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಮಂಗಳಾರತಿಯನ್ನು ಬೆಳಗಿರೆ - ಮಂಗಳಾಂಗಿಯರೆಲ್ಲರು ಪ ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ಅ.ಪ ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ1 ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ 2 ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ 3
--------------
ಲಕ್ಷ್ಮೀನಾರಯಣರಾಯರು
ಶ್ರೀ ಪಾರ್ವತೀ ಸ್ತೋತ್ರ ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ಪ ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ ಕಲುಷ ಪರಿಹರಿಸೇ 1 ಗಜಮುಖನತಾಯೆ ನೀ ಗಿರಿರಾಜ ಆತ್ಮಜೆ ವಜ್ರಿ ಮನ್ಮಥನುತೆ ಭಜಕಗೇ ಶುಭದೆ 2 ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ ಭಕ್ತಾಗ್ರಣೀ ಸದಾಶಿವನ ಅರ್ಧಾಂಗಿ ನಮೋ 3
--------------
ಪ್ರಸನ್ನ ಶ್ರೀನಿವಾಸದಾಸರು