ಸುಭದ್ರೆ
ಸತಿ ಸುಭದ್ರಾ
ಸತಿ ನಿನ್ನ ಸಲಹಲಿ ಲಕ್ಷ್ಮೀಲೋಲಾ ಶ್ರೀ ಲಕ್ಷ್ಮೀಲೋಲಾ ಪ.
ಭಾವ ಮೈದುನ ಅತ್ತೆಗೆ ಅತಿ ಹಿತಳಾಗಿ ನೀ
ಭಾವ ಶುದ್ಧದಿ ಹರಿ ಗುರು ಸೇವೆಯ ಮಾಡಿ 1
ಪತಿಸೇವೆಯ ಅತಿಹಿತದಿಂ ನೀ ಮಾಡೆ
ಪತಿವ್ರತೆಯಾಗಿ ನೀ ಸುತರನು ಪಡೆಯುವೆ 2
ಭಕ್ತವತ್ಸಲನ ಭಗಿನಿಯೆಂದೆನಿಸಿದಿ
ಸತತ ಶ್ರೀ ಶ್ರೀನಿವಾಸನ ನೆನಯುತ ನೀ ಬಾಳೌ 3