ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಗವನ್ನಾಮ ಅಂಬುಜ ಮುಖಿಯರು ಕಂಬುಕಂಠೆಯರು ಅಂಬರದಲಿ ನಾಟ್ಯವಾಡಿದರು ಪ ಪತಿ ಶ್ರೀ ಕೃಷ್ಣನರಥ ಬರೆ ಸಂಭ್ರಮದಿಂದಲಿ ಪಾಡಿದರು ಅ.ಪ. ಬಾಜ ಬಜಂತ್ರಿಯ ವಾದ್ಯರಭಸದೊಳು ಮೋಜಿನಿಂದಲಿ ಹರಿ ಬರುತಿರಲು ಸೋಜಿಗ ಪಡುತಲಿ ರಾಜ ವದನೆಯರು ಜಾಜಿಮಲ್ಲಿಗೆ ಹೂವ ಬೀರಿದರು 1 ವೇದ ಘೋಷಗಳಿಂದ ಮೋದಪಡುತ ಹರಿ ಸಾಧುಜನರ ಕೂಡಿ ಸರಸದಲಿ ಬೀದಿಯೊಳ್ ಬರುತಿರೆ ಮಾಧವರಾಯಗೆ ಸೂಜಿಮಲ್ಲಿಗೆ ಹೂವ ಬೀರಿದರು 2 ಕನ್ನಡಿ ಮಂಟಪ ಮಧ್ಯದೊಳಗೆ ಹರಿ ರನ್ನೆಯರೊಡಗೊಡಿ ಬರುತಿರಲು ಸನ್ನುತಾಂಗ ಶಿರಿ ಪ್ರಾಣನಾಥ ವಿಠಲನ ಸಂಭ್ರಮದಿಂದಲಿ ಸಾರಿದರು 3
--------------
ಬಾಗೇಪಲ್ಲಿ ಶೇಷದಾಸರು
ಭಗವನ್ನಾಮವನಾಡು ಅಡಿಗಡಿ| ಗಾಡು ಅಡಿಗಡಿಗಾಡು ಅಡಿಗಡಿ ಪ ಭಗವನ್ನಾಮದ ಸುಧೆಯನು ಸೇವಿಸಿ | ಸೊಗದಿಂ ನಲಿನಲಿದಾಡು ಅಡಿಗಡಿ ಅ.ಪ ಪಾಪವ ನೀಗಿ ಪಾವನನಾಗಿ| ಶ್ರೀಪತಿಯನು ಕೂಡ್ಯಾಡು ಅಡಿಗಡಿ 1 ಪಾಮರಗೋಲಿದಾ ರಾಮನ ನಾಮವ | ಪ್ರೇಮದಿ ಮನದೊಳಗಾಡು ಅಡಿಗಡಿ 2 ತರುಣಿಯ ಸೀರೆಗೆ ಅಕ್ಷಯವಿತ್ತ | ಕೃಷ್ಣನ ನಾಮವನಾಡು ಅಡಿಗಡಿ3 ದಾಸಜನರ ಮನದಾಸೆಯ ಸಲಿಸುವ | ವಾಸುದೇವನ ಕೂಡ್ಯಾಡು ಅಡಿಗಡಿ 4 ಇಂಗಿತವೀಯುವ ಮಂಗಳಮಹಿಮ | ರಂಗನ ನಾಮವ ನಾಡು ಅಡಿಗಡಿ 5 ಮರಣಕಾಲದೊಳಜಾಮಿಳಗೊಲಿದಾ | ನಾರಾಯಣ ನೊಡನಾಡು ಅಡಿಗಡಿ 6 ವೆಂಕಟರಮಣನ ಸಂಕಟಹರಣನ | ಕಿಂಕರನಾಗಿ ನೀನಾಡು ಅಡಿಗಡಿ 7
--------------
ವೆಂಕಟ್‍ರಾವ್