ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನಿತೆಂದು ಶಾಸ್ತ್ರ ಪೇಳುವವು ಪ ಪುನಹ ಪುನಹ ಭಗವತ್ಪ್ರಾಪ್ತಿ ಬೇಕೆಂಬುವರಿಗೆ ಅ.ಪ. ಅನುಬಂಧಿಗಳಲಿ ಮಮತೆಯನೆ ಬಿಡು ವಿಷಯ ವಾ ಸನೆಯನೀಡಾಡು ಸುಜ್ಞಾನ ಭಕ್ತಿಯ ಬೇಡು ಮನದಲ್ಲಿ ಹರಿಯ ಮೂರ್ತಿಯನೆ ನೆರೆ ನೋಡು ಸುಜ್ಞ ರನು ಕೊಂಡಾಡು ಅಜ್ಞಾನಿಗಳ ಸಹವಾಸ ಸುಡು ವನಜನಾಭನ ಪೂಜೆ ಮಾಡು ಪ್ರತಿ ಕ್ಷಣ ಬಿಡದೆ ಭಗವದ್ಗುಣಗಳ ಕೊಂಡಾಡು 1 ಪರಮಾಣು ಮೊದಲ್ಗೊಂಡು ವ್ಯಕ್ತ ತತ್ತ್ವದೊಳ ಹೊರಗೆ ವ್ಯಾಪಕನಾಗಿ ತದ್ರೂಪ ನಾಮದಿಂ ಕರೆಸುತಲಿ ತದ್ವಿಕಾರಗಳಿಲ್ಲದಲೆ ಸೃಷ್ಟಿ ಪರಿಪಾಲನೆ ಲಯಗಳನೆ ಮಾಡಿ ಮೋದಿಸುತಾ ಪರಮಾತ್ಮನೊಬ್ಬನಿಹನೆಂದು ಹರಿಗೆ ಮರೆಯದಲೆ ಮಹಿಮೆಗಳ ಪೊಗುಳುತಿರು ಮನುಜಾ 2 ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು ತಿರಿಯ ಕ್ಪುಂಡ್ರಗಳ ನಿಂದಿಸಬೇಕು ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು ಗುರು ಹಿರಿಯರ ವಗುಣಗಳೆಣಿಸದಿರ ಬೇಕು ಮ ತ್ಸರವ ಬಿಡಬೇಕು ಭಕ್ತರಲಿ ಹೀಗೆ ಒರೆದೊರೆದು ಪೇಳುವರು ಬುಧರು ನಿತ್ಯದಲಿ 3 ನಿತ್ಯ ನೈಮಿತ್ತಿಕ ಸುಕರ್ಮ ಮಾಡಲು ಬೇಕು ಕೃತ್ಯವಲ್ಲದೆ ಲೋಕವಾರ್ತೆಗಳ ಬಿಡಬೇಕು ಚಿತ್ತದಲಿ ಹರಿಪಾದ ಚಿಂತಿಸುತಲಿರಬೇಕು ವಿತ್ತದೇಹಾಗಾರ ಭಗವಂತನದೆಂದು ದೇ ಪರಿಯಂತ ಮಾಳ್ಪ ಕರ್ಮ ಸತ್ಯಸಂಕಲ್ಪಕಿವು ಪೂಜೆ ಎನಬೇಕು 4 ಸೀತೋಷ್ಣ ಸುಖ ದುಃಖ ಮಾನಾಪಮಾನ ಜಯ ಭೀತಿ ನಿರ್ಭೀತಿ ಅಪಜಯ ಜ್ವರಾಪಸ್ಮಾರ ಭೂತ ಬಾಲ ಗ್ರಹ ಮೃಗಸರ್ಪ ನೃಪ ಚೋರ ಯಾತನೆಗೆ ಭಯಪಡದೆ ಸರ್ವತ್ರದಲಿ ಜಗ ನ್ನಾಥವಿಠ್ಠಲನ ಸ್ಮರಿಸುತಿರು ಮಹಾ ಪಾತಕವ ಪರಿಹರಿಸಿ ಪೊರೆವ ದಯದಿಂದಾ 5
--------------
ಜಗನ್ನಾಥದಾಸರು
ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರ ಪನ್ನ ತಾ ಪಾಪಹರನೇ ಪ ಎನ್ನಪರಾಧಗಳ ಎಣಿಸದಿರು ಅಜಭವಶ ರಣ್ಯ ಪರಿಪೂರ್ಣೇಂದಿರಾಗಾರ ಅ ಶುದ್ಧಾಖ್ಯ ದ್ವಿಜನು ದಾರಿದ್ರ್ಯದಲಿ ನೆರೆ ನೊಂದು ಸದ್ಧರ್ಮ ತೊರೆದು ಮರೆದು ಶ್ರಾದ್ಧಾದಿ ದುಷ್ಟನ್ನ ಮೆದ್ದು ನಿಂದಿತನಾಗಿ ಬಿದ್ದಿರಲು ಸತಿಯು ಮತಿಯು ತಿದ್ದಿ ಪೇಳಲು ಕೇಳಿ ಶುದ್ಧ ಭಾವದಿ ತವ ಪ ದದ್ವಯಕ್ಕೆರಗಿ ಮರುಗಿ ಪದ್ಮೇಶ ಸಲಹೆನಲು ಸಿದ್ಧಿಸಿ ಮನೋರಥವ ಉದ್ಧಾರವನು ಮಾಡ್ದೆ ನೋಡ್ದೆ 1 ವಿಧಿಯ ಸಂಸ್ತುತಿ ಕೇಳಿ ಮಧ್ವಜಾಕಾರಿ ಮದಡತಮನುದರ ಬಗೆದೇ ಉದಧಿ ಮಥನದಲುದಿಸಿದಮೃತ ದೇವತೆಗಳಿಗೆ ಮುದದಿಂದಲೆರೆದೆ ಪೊರೆದೆ ಹೇಮ ಲೋಚನನ ನೀ ದೌಂಷ್ಟ್ರ ತುದಿಯಿಂದ ಕೊಂದೆÀ ತಂದೆ ಬೆದರದಲೆ ಕರೆದರ್ಭಕನ ನುಡಿಗೆ ಅವನಯ್ಯ ನುದರ ರಕ್ತವನು ಸುರಿದೇ ಮೆರೆದೇ 2 ವೈರೋಚನಿಯ ಭೂಮಿ ದಾನವನು ಬೇಡಿ ಭಾ ಗೀರಥಿಯ ಪಡದಿ ಪದದಿ ಧಾರಿಣಿಯ ದಿವಿಜರಿಗೆ ದಾನವಿತ್ತವನಿಪರ ಗಾರು ಮಾಡಿದೆ ಸವರಿದೇ ನೀರಧಿಯ ಬಂಧಿಸಿ ದಶಾಸ್ಯನ ಬಲವನು ಸಂ ಹಾರ ಮಾಡಿದೆ ರಣದೊಳು ಕಾರಗೃಹದೊಳಗಿಪ್ಪ ಜನನಿ ಜನಕರ ಬಿಡಿಸಿ ತೋರಿಸಿದೆ ವಿಶ್ವರೂಪಾ ಶ್ರೀಪಾ 3 ಆದಿತೇಯರು ಮಾಳ್ಪ ಸಾಧುಕರ್ಮಗಳ ಶುದ್ಧೋದನಾಚರಿಸೆ ತಿಳಿದು ವೇದ ಶಾಸ್ತ್ರಾರ್ಥ ಪುಸಿಯೆಂದರುಪಿ ಜಿನನತಿ ಭೇದಗೈಸಿದೆ ಸಹಿಸಿದೇ ಭೇದಗೊಳಿಸುವ ಕಲಿಯ ಕೊಂದು ಶೀ ಘ್ರದಿ ತಮಸಿಗೈಸಿದೆ ಕಲ್ಕಿ ಭಳಿರೇ ನಿಖಿಳ ಲೋಕವನೆಲ್ಲ ಧರಿಸಿ ಪ್ರಳ ಯೋದಕದಿ ಮಲಗಿ ಮೆರೆದೇ ಪೊರೆದೇ 4 ಹಂಸರೂಪದಲಿ ಕಮಲಾಸನಗೆ ತತ್ವೋಪ ದೇಶಮಾಡಿದೆ ಕರುಣದೀ ವ್ಯಾಸಾವತಾರದಲಿ ದೇವ ಋಷಿ ಪಿತೃಗಳಭಿ ಲಾಷೆ ಪೂರೈಪ ನೆವದೀ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಕಾಶÀ ಮಾಡಿದೆ ಮೋದದಿ ವಾಸವಾನುಜ ಜಗನ್ನಾಥವಿಠಲ ನಿನ್ನವರ ಸಲ ಹೋ ಸಮರ್ಥಾ ಕರ್ತಾ 5
--------------
ಜಗನ್ನಾಥದಾಸರು