ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು 1 ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು 2 ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ 3 ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು 4 ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು 5
--------------
ವ್ಯಾಸರಾಯರು
ಜಯದೇವಿ ಜಯದೇವಿ ಜಯಭಗವದ್ಗೀತೆ | ಶ್ರಯ ಸುಖದಾಯಕಮಾತೇ ಶೃತಿ ಸ್ಮøತಿ ವಿಖ್ಯಾತೇ ಪ ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ | ಸೋಹ್ಯವ ಕಾಣದೆತನ್ನೊಳು ತಾನೇ ಮರೆದಿರಲೀ| ಬೋಧ ಪ್ರತಾಪದಲೀ| ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ 1 ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ | ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ | ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ | ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ 2 ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು| ಸಾವಿರ ಸಾಧನವೇತಕೆ ಜೀವನ್ಮುಕ್ತವನು | ದೇವಮನುಜರಿಗೆ ತಿಳಿಯದು ಪದಪದ ಮಹಿಮೆಯನು | ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಣೆ ಮಾತ್ರದಿ ಸ್ವತಂತ್ರ ದೊರಕುವುದು ಜಗದೊಳಗೆ ಶ್ರೀಹರಿ ಸ್ಮರಣೆ ಪ ಸ್ಮರಣೆ ಮಾತ್ರ ಸ್ವತಂತ್ರವೆಂದರೆ ಪರಮ ಭಗವದ್ಗೀತೆ ಅಪ್ಪಣೆ ಕರುಣಾಸಾಗರ ದಧಿಯಚೋರನೂ ಶರಣುಪಾರ್ಥಗೆ ಅರುಹು ಮಾಡಿಹ 1 ಸುಲಭದಿಂದಲಿ ಶ್ರವಣಮನನಾಗೀ ಜಗದೊಳಗೆ ನಿನಗೆ ಫಲಿತವಾಗೊ ನಿಧಿ ಧ್ಯಾನಾಗೀ ಕೊಲುಮೆತಿತ್ತಿಯನೂದಲಾಗುವ ಫಲವು ಕಂಡು ಕಾಣದಿರುವೆಯೊ ಕಲೆಯ ತೊಟ್ಟನು ನೀ ಗಲಾ ಪರಸುಳುಹಿನೊಳಗೆ ಹೊಕ್ಕಿ ಮಾಡೊ 2 ಬೆಂಗಳೂರಿಗೆ ಪೋಗಿ ನಿಂದಲ್ಲಿ ವೋ ಮಾಯಜೀವಾ ಮಂಗಳಾಂಗ ಶುಭಾಂಗಣದಲ್ಲಿ ತಂಗಿ ತಾನೆ ನಿಮಿಷ ನಿಮಿಷಕೆ ಸಂಗಮೇಶ್ವರನಾಗಿ ನಿಜದಾ ಬಂಗೆಲೆಯೊಳಗಿರುವ ತುಲಶೀರಾಮತಾ ನಿಜಲೀಗನೇಳಿದ 3
--------------
ಚನ್ನಪಟ್ಟಣದ ಅಹೋಬಲದಾಸರು