ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ ಅಡಿಗಳಿಗೆರಗುವೆನಾ ಪ ವಿಪ್ರ ಮಡದಿಯರನ್ನವ ಕೊಡಲು ಭುಂಜಿಸಿದ ಪಾಲ್ಗಡÀಲ ಶಯನ ಕೃಷ್ಣ ಅ.ಪ ಮಡದಿಯ ನುಡಿಕೇಳಿ ಕಡುಭಕುತಿಯಲವ ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ ಬಡವ ಸುದಾಮನಿಗೆ ಕೆಡದ ಸಂಪದವನ್ನು ಗಡನೆ ನೀಡಿದ ದೇವಾ1 ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ- ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ ಪ್ರಭು ಶ್ರೀರಾಮನೆ ನಿನಗೆ 2 ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ- ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ ಬಳಗವ ಸಲಹಲು ಇಳೆಯೊಳು ಕಾರ್ಪರ ನಿಲಯ ಶ್ರೀ ನರಹರಿಯೇ3
--------------
ಕಾರ್ಪರ ನರಹರಿದಾಸರು
ಛಳಿಸದಿರು ಚಂಡಿ ತನುವೆ ನೀನುಒಳಗಾಗದೊರಟುತನವೆ ತರವೆ ಪಗರ್ಭವಾಸವಗಳಿಸಿದೆ ಹಾಗೆ ನೀನರ್ಭಕತ್ವದಲಾಡಿದೆ ಬಿಡದೆನಿರ್ಭಯದಿ ನೀ ಬದುಕಿದೆ ಭೋಗದಲಿದುರ್ಭಗರ ದಾರಿಗೊಲಿದೆ ನಲಿದೆ 1ಕಾಮಾಂಧಕಾರಕೆಳೆದೆ ನನ್ನ ನಿಷ್ಕಾಮದಲಿ ನಿಲಿಲೀಸದೆ ಕಳದೆನೇಮಕ್ಕೆ ನೀನಲಸಿದೆ ಶೀತೋಷ್ಣಭೀಮಕ್ಕೆ ನೀ ಬೆದರಿದೆ ಬರಿದೆ 2ಕಾಲಗಳ ಬಹು ಕಳಸಿದೆ ವ್ಯರ್ಥದಲಿಶ್ರೀಲೋಲನನುಸರಿಸದೇ ಹೋದೆಮೂಲವನೆವರೆ ಮಾಡಿದೆ ದೋಷಗಳಕೀಲುಗಳಿಗಳಿಕಾಲ್ನೀಡಿದೆ ಜಡಿದೆ 3ಮನವೀಗ ಮಾಡಿತಿನಿತಾ ನಾನಿದಕೆಮನೆ ಮಾತ್ರವಾಗೆ ಮಾತನಿಡುತಾತನುವಿನಲಿ ತಪ್ಪಿಡಿಯುತಾ ಯಾಕೆ ನೀನೆನುವೆಯನೆ ನೀನೆ ಚಿತ್ತವ್ರಾತಾ 4ಮನ ನೀನೆ ನೀನೆ ಮನವೂ ಕ್ರಿಯೆಯಮನ ಮಾಡೆ ಮೂಡ್ದೆತನುವೂ ಘನವೂನೆನೆಯಲೆರಡಿಲ್ಲ ನೀವು ಏಕತ್ವವೆನುತೆಂದೆನಿರೆ ಬಂಧವೂ ದಿಟವೂ 5ಕಾರಣವೆ ಮನವಾದರೆ ಅದರೊಡನೆಹೋರುವೆನು ನಾನು ಹೆದರೆನದರೆತೋರೆ ನೀ ಮುಂದೆ ಬೇರೆ ಬಂಧನವೂಬೀರಿತಿದು ನೀ ಕಯ್ಯಾರೆ ತಾರೆ 6ನೀ ಬಾರದಿರುವೆಯಲ್ಲ ುೀಮಾತನಾ ಬಾಯಲೆನ್ನೆನಲ್ಲಾ ಸೊಲ್ಲಾಆ ಬಗೆಯ ಮೂಡಿತಿಲ್ಲ ಇದಿರಾಗಿನೀ ಬಂದು ನಿಲಲು ಸಲ್ಲಾ ಹೊಲ್ಲಾ 7ನನಗುಂಟು ಮನಸಿಗುಂಟು ವ್ಯವಹಾರನಿನಗಾಗಬಾರದಂಟೂ ನಂಟುಜನಿಸಿಬರೆ ಬಂತುಗಂಟು ಆವರಣವೆನಗಾುತು ಪದರವೆಂಟೂ ಬಂಟೂ 8ಅನುಮಾನವಿಲ್ಲವಿಸಿದಕೆ ಪ್ರತ್ಯಕ್ಷವನುಭವಿಸಿ ಪೇಳ್ದೆನದಕೆ ಅಳುಕೆಜಿನುಗದಿರು ಮುಂದೆ ಜೋಕೆ ಹರಿಯಂಘಿü್ರಯನುಸರಿಸದಂದವೇಕೆ ಬೇಕೆ 9ಹರಿಪಾದಪದ್ಮವನ್ನು ನಾನುಬೆರೆವೆ ನೀ ಬಳಲಿಕೆಯನೂ ುನ್ನೂತರಬೇಡ ತಥ್ಯವನ್ನು ಪಡೆವದಕೆಬರೆ ಮುಂದೆ ಬಹುಮಿತ್ರನೂ ನೀನು 10ಶರೀರವಿರೆ ಶ್ರಮವು ನಿನಗೆ ಜನ್ಮಗಳಧರಿಸುತ್ತ ದಣಿವು ನಿನಗೆ ಹೀಗೆಸರಿಯಾಯ್ತು ದುಃಖ ನಮಗೆ ಇದಕಂಡುಇರುವ ಬಗೆ ವಿಶ್ವದೊಳಗೆ ಹೇಗೆ 11ಅದರಿಂದ ನೀನು ನಾನು ಒಂದಾಗಿಹುದುಗಲಾದಿಯನೀಶನೂ ತಾನುಪದವಿಯನು ಪಾಲಿಸುವನು ಬಳಿಕಲಿನ್ನುದುಸುವಕಷ್ಟಗಳನೂ ಕೊಡನೂ 12ಬರುವದಾನಂದ ನಮಗೆ ತಿರುಪತಿಯವರದ ವೆಂಕಟರಮಣಗೆ ಎರಗೆಭರಿತಾತ್ಮಗಾವು ಹೊರಗೆ ಹೀಗೆ ನಾವಿರಲುಂಟು ದೇವನೊಳಗೆ ಸಲುಗೆ 13ಕಂ||ಛಂದಾನುವೃತ್ತಿ ಮೂರ್ಖರಿಗೆಂದಾಡಿದ ನುಡಿಯು ಸತ್ಯವಾುತೀ ದೇಹವುಮುಂದೊರದೆ ಪೇಳಲುತ್ತರನೀಂದೊಡಬಡಿಸುತ್ತ ಕೇಳಿಕೊಳುತಿಹದೊಲವಿಂ
--------------
ತಿಮ್ಮಪ್ಪದಾಸರು
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ
ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು