ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ ಅಡವಿಯೊಳಿರಲು ಅರಣ್ಯದೊಳಿರಲು ಮಡುವಿನೊಳಿರಲು ಮರದ ಮೇಲಿರಲು ಪೊಡವಿಗೀಶ್ವರ ತಾನು ದೃಢಭಕ್ತನಂ ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1 ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ ನಂದದಿಂದಕ್ಷಯವನಿತ್ತ ರಂಗನು ನೀನು 2 ಭರದೆ ಭಗದತ್ತನು ಅಸ್ತ್ರ ಬಿಡಲು ಕೊರಳ ಚಾಚಿದನಾಗ ಕರುಣಾವಾರಿಧಿಯು ವರುಣಗದೆಯನಾಗ ಮರುಳತನದಿ ಬಿಡೆ ಮರಳಿ ಅವನ ಉರುಳಿಸಿತು ಶೃತಾಯುವು 3 ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ ಕರ್ಣ ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4 ಅಂದು ಅರ್ಜುನ ತನ್ನ ಕಂದನೊಡನೆ ಕಾದೆ ಹಿಂದಿನ ವೈರದಿಂ ಶಿರವನ್ನು ಹರಿಯೆ ಬಂದು ಮುಕುಂದ ಸಂಧಿಸಿ ಶಿರವನ್ನು ಆ ಇಂದಿರೆ ರಮಣ5 ಉತ್ತರೆ ಗರ್ಭವು ಬತ್ತಿ ಬೀಳಲು ಆಗ ಉತ್ತಮ ಋಷಿಗಳೆಲ್ಲರ ನೋಡಿ ನಿತ್ಯಬ್ರಹ್ಮಚಾರಿಗಳು ಪಾದದೀ ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6 ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ ಹನುಮಾದಿಗಳು ಬ್ರಹ್ಮಚರ್ಯವು ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7 ಸರಸಿರುಹನಯನಾ ಫಣಿರಾಜಶಯನ ಶರಣಾಗತದುರಿತಾಪಹರಣ ದೈತೇಯಸಂಹರಣ ಗೋವರ್ಧನೋದ್ಧರಣ ಪೀತಾಂಬರಾಭರಣ ಕೌಸ್ತುಭಾಭರಣ 8 ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ ವಿಶ್ವನಾಯಕ ಶಮನ ಮಾಡಿ ಕಾಯ್ದು ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9
--------------
ಯದುಗಿರಿಯಮ್ಮ
ನಮೋ ನಮೋ ಮುಖ್ಯ ಪ್ರಾಣ ನಾಥನೇ ನಮೋ ಜಗದೊಳು ಪ್ರಖ್ಯಾತನೇ ಪ ಧರಣಿ ಸುತೆಯ ಮುಖ ಚಂದ್ರಚಕೋರನಾ ಸಿರಿ ಚರಣಾಂಬುಜ ಭೃಂಗಾ ಸುರವರರಿಯ ತಂದೆಯ ಮಾವನ ಸಂ ಹರಿಸದೆ ವಾನರ ತುಂಗಾ1 ದುರ್ಯೋಧನಾದಿ ನೂರೊಂದು ಮಂದಿಯ ತನು ಪರ್ವತ ವಜ್ರದಂಡಾ ಕರಿ ಏರಿ ಬಹ ಭಗದತ್ತನ ಗದೆಯಿಂದ ಹರಿಸದೆ ಭೀಮ ಪ್ರಚಂಡಾ2 ಧರಿಯೊಳುತಾನವ ಗುಣ ಕರಿಯಾವಳ ನರಸಿಂಹನು ಮಧ್ವರೇಯ ಪರಮರೂಪವ ಮೂರಾಗಿ ದೊರಿದೆ ಗುರು ಮಹಿಪತಿ ಪ್ರಭು ಪ್ರೀಯಾ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸು ಮನವೇ ನೀ ಪೂರ್ಣ ಕರುಣಾಸಾಗರ ದೇವನ್ನಾ ಪ ದಾವ ನಿಗಮಾಗಮ ಪೌರಣಿಕ ತಿಳಿಯದು ಮಹಿಮೆದಾವನ್ನ ಅವನ ನಖಕಾಂತಿಗೆ ಸರಿ ಪೊಲಿರು ಮಿತ್ರೆಂದು ಹವ್ಯವಾಹನ್ನಾ 1 ಭಕ್ತಿ ಭಾವಕ ಶಿಲ್ಕಅನುದಿನ ಬಲಿಬಾಗಿಲ ಕಾಯಿದಿಹನಾ| ಶಾಪದಿ ವಿರಹಿತ ಮಾಡಿದನಾ 2 ಹೋ ಹೋ ಎಂದು ಬಯಿವನಾ| ಎಣಿಕೆ ಇಲ್ಲದೆ ಪರಿಪರಿ ಯಿಂದಲಿ ಅಡಿಗಡಿಗೆ ರಕ್ಷಿಪನ್ನಾ 3 ಭಗದತ್ತನು ಗಜವೇರಿ ಬಾಣವ ಬಿಡಲಾಗಳೆ ಉರುವಾತನ್ನಾ | ಗೋಪಾಲರ ರಕ್ಷಿಸಲೋಸುಗ ಬೆರಳಲಿ ಗಿರಿ ಎತ್ತಿದನ್ನಾ 4 ಏಳದೆ ಗರ್ವದಿ ಕುಳಿತರೆ ದುರ್ಯೋಧನನ ಕೆಳಗೆಡಹಿದನ್ನಾ| ಶ್ರೀಲಲನೆಯ ಮನೋಭಾವನೆ ಪೂರಿತ ಮಹಿಪತಿ ನಂದನ ಜೀವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು