ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ನಾನಾ ಸಾಧನೆಗಳನು | ಜ್ಞಾನಿಗಳ ಕೂಡದನಕಾ ಮರುಳೇ ಪ ಸಕಲ ಸಾಮಗ್ರಿಯನು ತಂದಿರಲೇನು ಪಾ | ಕಕೆ ವಹ್ನಿ ಇಲ್ಲದನಕಾ ಮರುಳಾ 1 ಪ್ರಕಟವಾಗಿರಲು ನಯನಾದಿಂದ್ರಿಯಗಳಿಗೆ ಐಂ | ದ್ರಿಕ ಬೆಳಗವಿಲ್ಲದನಕಾ ಮರುಳೇ 2 ಹಸನ ಭೂಮಿಯ ಮಾಡಿ ಬೀಜ ಉಡಿಗಟ್ಟಿರಲು | ವಸೆದು ಮಳೆಯಾಗದನಕಾ ಮರುಳೇ 3 ಪ್ರಕಟಿಸಿದ ಅನ್ನ ಭಕ್ಷದಿ ಶಾಖಗಳಿರಲು | ಯಶವಾಜ್ಯ ಬಡಿಸದನಕಾ ಮರುಳೇ 4 ತುಂಬಿ ಕುಳಿತೇನು ದೊಡ್ಡವರೆಲ್ಲಾ ನಾವಿಯೊಳು | ಅಂಬಿಗನು ಬಾರದನಕಾ ಮರುಳೇ 5 ನಂಬಿ ಗುರು ಮಹಿಪತಿಸುತಸ್ವಾಮಿ ಶ್ರೀಚರಣ | ದಿಂಬವನು ಪಡೆಯದನಕಾ ಮರುಳೇ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ