ಎಚ್ಚರಿಕೆ ಎಚ್ಚರಿಕೆ ಎಲೋ ದೇವ |
ಎಚ್ಚರಿಕೆ ಎಚ್ಚರಿಕೆ |
ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಪ
ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ |
ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ |
ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ |
ಪಂಕಜ ಹೃದಯಾರ್ಕನೆಯಾ1
ಪರಮೇಷ್ಠಿ ವಂದನೆಯಾ |
ಶರಧಿ ತಾರಾ ಕರುಗಳ ಕಾಯಿದನೇಯಾ |
ಎರಡೇಳು ಲೋಕ ಪೊರೆವಾ ಭಾರಣ ಹರಿಯಾ |
ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ 2
ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ |
ಭಯ ನಿವಾರಣ ನಿಜ ಭಂಟರಿಗೆ ಬಂಟಯಾ |
ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ |
ತ್ರಿಯಗುಣ ವಿರಹಿತ ಶೇಷಗಿರಿವಾಸಯಾ 3