ಇದೇ ಭಕ್ತವರ್ಯನ ಲಕ್ಷಣ ಪಾವನವಿದು ಕಾಣಾ
ಪರಮಾತ್ಮನ ರೂಪ ಚರಾಚರದ ಜಗದಲ್ಲಿ 1
ಇದೇ ಪರಿಯಲಿ ಸ್ವರೂಪದಲ್ಲಿ ಜಗವೆಲ್ಲಾ ಕಾಂಬಾ
ಆತ್ಮರೂಪ ಭಗವಂತನೆ ಸತ್ಯ ಮಿಕ್ಕವೆಲ್ಲಾ ಮೀಥ್ಯ
ಲಕ್ಷ್ಯವೆಲ್ಲಾ ತನ್ನೋಳ ತಿರುಗಿಸಿ ಆನಂದವ ಪಡೆವ
ಕಾಣುವನಿವ ಪರಮಾತ್ಮ ಸರ್ವಾತ್ಮ 2
ಸಂಸಾರದಲಿ ವಿಷಯದ ಭೋಗ ಪ್ರಾರಬುಧದಲಿಪಡೆ
ಮಾಯೆಮಾತ್ರವಿದು ಎನ್ನುತ ತಿಳಿವಾ 3
ನಿಜಾಸಕ್ತಿ ಪಡೆಯದಲೇ ನಿರುತ ತನ್ನಯ ಹೃದಯಾಂತ
ಪರಮಾತ್ಮನ ನೆನೆವ ದೇಹಾದಿಗಳ ಈ ಪರಿಣಾಮಗಳಿಗೇ
ಮೋಹಗೊಳಲಾರ ಕಾಮನೆಯಾ ಬೀಜಾಂಕುರವೆಂದೂ
ನಾಟದು ಇವನಲ್ಲೀ ಕಾಣುವನಿವ ಪರಮಾತ್ಮ ಸರ್ವಾತ್ಮ
ಪ್ರಭೂಶಂಕರನ ರೂಪಾ 4