ಭಕ್ತವತ್ಸಲಭಯನಿವಾರಣ ಭಾಗವತರ ಪ್ರಿಯ
ನಿತ್ಯತೃಪ್ತನೆ ನೀರಜನಯನ
ಸತ್ಯಭಾಮೆಪತಿ ಸರಸಿಜವದನ ಪ
ಮಂಗಳ ಚರಣದಿ ಗಂಗೆಯ ಪಡೆದ ಭು-
ಜಂಗನ ತುಳಿದ ಪದಾಂಬುಜಕೆ ನಮೊ1
ವಿನತೆಸುತನ ಹೆಗಲು ಘಮಿಕಿಲಿಂದೇರಿಪ
ಕಣಕಾಲಂದಿಗೆಮಣಿಕಾಲಿಗೆ ನಮೊ 2
ಉಟ್ಟ ಪೀತಾಂಬರ ಕಟ್ಟಿದ ಉಡಿದಾ-
ತ್ರಿಜಗ ಊರ್ಹೊಟ್ಟೆಗೆ ನಮೊ 3
ನಾಲ್ಕುಮುಖದ ಅಜನಂದನರುದಿಸಿದ
ನಾರಾಯಣ ನಾಭಿಕಮಲಕ್ಕೆ ನಮೊ 4
ಕರ್ಣಕುಂಡಲವು ಕಪೋಲದಲ್ಹೊಳೆಯುತ
ಸಣ್ಣ ನಾಮದರವಿಂದನೇತ್ರಕೆ ನಮೊ5
ವರ ಶಂಖಚಕ್ರದ ಕರಕÀಮಲಕೆ ನಮೊ 6
ನಾಸಿಕ ಚೆಲುವ ಪ್ರಕಾಶ ಕಿರೀಟ ಭೀ-
ಮೇಶಕೃಷ್ಣನ ಮುಖಪದ್ಮಕೆ ನಮೊ 7