ಶ್ರವಣಾನಂದ ವಿಠಲ | ಭುವನ ಪಾವನನೇ ಪ
ಪವಿತರಗೈ ಇವಳ | ತವಗುಣ ಗಾನದೀ ಅ.ಪ.
ಸುಪ್ತಿಯಲಿ ಗುರುದತ್ತ | ಉತ್ತುಮಾಂಕಿತ ಕೇಳಿಇತ್ತಿಹೆನೊ ಉಪದೇಶ | ಭಕ್ತವತ್ಸಲನೇಎತ್ತಿ ಭವದಿಂದವಳಾ | ಉತ್ತರಿಸ ಬೇಕಯ್ಯಚಿತ್ತಜಾಪಿತ ಸರ್ವ | ಕರ್ತೃಕಾರಕನೇ 1
ಪತಿಸುತರು ಹಿತರಲ್ಲಿ | ವ್ಯಾಪ್ತ ನಿನ್ನನು ತಿಳಿದುಹಿತದಿಂದ ಸೇವಿಸುತ | ಮತಿಯ ಕರುಣಿಸುತಾ |
ಗತಿ ಗೋತ್ರ ನೀನಾಗಿ | ಮತಿ ಮತಾಂವರರಂಘ್ರಿಶತ ಪತ್ರ ಪೂಜಿಸುವ | ಪಥದಲ್ಲಿ ಇರಿಸೋ 2
ಹರಿಗುರೂ ಸದ್ಭಕ್ತಿ | ನಿರುತ ವೃದ್ಧಿಸುತಿವಳಪರಿಪರಿಯ ಸತ್ಕಾಮ | ಪರಿಪೂರ್ಣಗೊಳಿಸೀನೆರೆಯವರಿಗಾಶ್ಚರ್ಯ | ತೆರೆದಂತೆ ನೀ ಮಾಡಿಮೆರೆಸೊ ಈ ಭುವದಲ್ಲಿ | ಪರಮ ಕೃಪೆ ಸಾಂದ್ರ 3
ವೇಣುಗೋಪನೆ ನಿನ್ನ | ಗಾನಕಲೆ ವೃದ್ಧಿಸುತಸಾನುರಾಗದಿ ಕಾಯೊ | ಜ್ಞಾನಿ ಜನ ವಂದ್ಯಾ |ಮಾನಾಭಿ ಮಾನಗಳು | ನಿನ್ನದೆಂದೆನಿವಮತಿನೀನಾಗಿ ಕರುಣಿಪುದು | ಮಾನನಿಧಿ ದೇವಾ 4
ಪರಿ ಪಾಲಿಸಿವಳಾ 5