ಪೋಗುವೆನೆ ರಂಗ ಪೋಗುವೆನೆ ಕೃಷ್ಣ
ಈಗ ಕರೆ ಬಂದಿದೆ ಮಧುರಾ ಪುರಕ್ಕೆ ಪ.
ಮದಿಸಿದ ಕಂಸನು ಚದುರ ಅಕ್ರೂರನ
ಮುದದಿ ಕಳಿಸಿದ ಮಧುರ ವೇಣಿಯೆ ಕೇಳೆ 1
ಬಿಲ್ಲು ಹಬ್ಬವಂತೆ ಮಲ್ಲರ ಗೆಲ್ಲಬೇಕಂತೆ ಸಖಿ
ಪುಲ್ಲಲೋಚನ ಕೃಷ್ಣಾ ಇಲ್ಲಿ ನÀಮ್ಮನು ಬಿಟ್ಟು 2
ಕಂಗೊಳಿಸುವ ಬೆಳದಿಂಗಳ ಸೊಗವಿಲಿ
ಪೊಂಗೊಳಲೂದೆಮ್ಮಂಗಕೆÉ ಹರುಷವಿತ್ತ3
ನಲಿವಿಲಿ ಮೀಸಲು ಬೆಣ್ಣೆಯನಿಡಲು
ನಿಲುಕಿತ ಮೆದ್ದೆಮ್ಮ ಒಲವಿತ್ತುದ್ದರಿಸಿದ 4
ಗೋಕುಲವೇತಕೆ ಆ ಕಮಲಾಕ್ಷನಾ
ಕಟಾಕ್ಷವಿಲ್ಲದೀಪರಿ ಸಹಿಪುದೆ 5
ಯಮುನೆಯ ತೀರದೊಳ್ ಎಮ್ಮಯ ವಸ್ತ್ರವ
ಕ್ಷಮೆಯಿಂದಿತ್ತ ಕಮಲನಯನ ಕೃಷ್ಣ 6
ರಥಬಂದಿದೆ ನೋಡೆ ಅತುಳ ಮಹಿಮಗೆಂದು
ಜತೆಯೊಳು ಬಲರಾಮ ಹಿತದಿ ಅಕ್ರೂರ ಸಹ 7
ಬಿಟ್ಟಿರಲಾರೆವೆ ಪುಟ್ಟ ಕೃಷ್ಣನ ಪಾದ
ದಿಟ್ಟ ಶ್ರೀ ಶ್ರೀನಿವಾಸಗಿಷ್ಟವಂತೆ ಕೇಳೆ 8
ಭಕ್ತವತ್ಸಲನೆಮ್ಮ ಭರ್ತನೊಳನುರಾಗವಿತ್ತು
ಬಾಳಿರೆಂದು ಇತ್ತು ವಚನವನ್ನು 9