ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಗುರು ಹೃದ್ಗುಹಾಂತರವಾಸ ಪ ವಾಯುವಂತರ್ಗತ ಕೃಷ್ಣಯ್ಯ ಜೀಯ್ಯ ಅ.ಪ ಕಾಯಯ್ಯಇವ ನಿನ್ನವನೆಂದು ಅನುದಿನ ಕಾಯ ವಾಚದಲಿ ನಿನ್ನ ನೆನವಿರಲಿ ಜೀಯ ಶ್ರೀ ವಿಜಯರಾಯರ ಸೇವಾ ಕಾರ್ಯಗಳಿಗಭಯವ ನೀಡಯ್ಯ 1 ಲೌಕಿಕದಲ್ಲಿಹನೆಂದು ನಿರಾಕರಿಸದಲೆ ನಿನ್ನ ಏಕಾಂತ ಭಕ್ತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲವ ಹರಿಸಿ ಕೃ ಪಾ ಕಟಾಕ್ಷದಿ ನೋಡಿ ಕಾಯಬೇಕಯ್ಯ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸೊ ಭಕ್ತಿಬಲಜ್ಞಾನ ಸಾಧನವನಿತ್ತು ಭಕ್ತವತ್ಸಲನೆಂಬೊ ಬಿರುದು ನಿನ್ನೊಳು ಇರಲಿ ಮುಕುತರೊಡೆಯ ದೇವಾ ಶ್ರೀ ವೇಂಕಟೇಶ 3
--------------
ಉರಗಾದ್ರಿವಾಸವಿಠಲದಾಸರು
ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ
ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ. ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವÀಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ 1 ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ 2 ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ 3
--------------
ವಾದಿರಾಜ
ಮಾಧವ ಮುಕುಂದ ಹರಿ ದನುಜಾರಿದಯಾವಾರಿಧಿ ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ. ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ) ಹರಿಗೆ ಒಪ್ಪಿಸು ಎನಲು ಊರ ಹೊರಗೋಡಿಸಿರಲು ಭರದಿಂದ ಬಂದು ಮರೆಹೊಗಲು ವಿಭೀಷಣನು ಚರಣಕಮಲಕೆ ಎರಗಲು ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ 1 ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ ನಡುಸಭೆಯೊಳು ನಿಲ್ಲಿಸಲು ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ ದುಡುಕುತಿರಲಾಕ್ಷಣದಲಿ ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ- ದೊದರುತಿರಲು ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ 2 ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ ಮತ್ತ ತೊಡೆಯೇರಿಇರಲು ನಿತ್ಯದಲಿ ಸುರುಚಿ ಸುನೀತಿ ಕುಮಾರಕನ ಎತ್ತಿ ಕಡೆಯಕ್ಕೆ ನೂಕಲು ನಿತ್ತ ವಿಚಾರವಿಲ್ಲದಂತೆ ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ 3
--------------
ಹೆಳವನಕಟ್ಟೆ ಗಿರಿಯಮ್ಮ
ರಾಮಚಂದ್ರವಿಠ್ಠಲನೆ ನೀನಿವನ ಕಾಮಿತಾರ್ಥಗಳಿತ್ತು ಕಾಪಾಡೊ ಹರಿಯೇ ಪ ಭೂಮಿಜೆಯ ರಮಣ ಸುರಸಾರ್ವಭೌಮನೆ ದೇವಪ್ರೇಮ ಈಕ್ಷಣದಿಂದ ನೋಡೊ ದಯಾಸಾಂದ್ರ ಅ.ಪ. ಗುರುದ್ವಾರವಿಲ್ಲದಲೆ | ಗರುಡವಾಹನ ಕರುಣದೊರಕಲಾರದು ಎಂಬ | ಸ್ಥಿರಮತಿಯನಿತ್ತೂಗುರುಭಕ್ತಿ ಹರಿ ಭಕ್ತಿ | ಕರುಣಿಸುತ ವೈರಾಗ್ಯಸ್ಥಿರಮಾಡಿ ಪಾಲಿಪುದು | ತರತಮದ ಜ್ಞಾನಾ 1 ಪತಿ ಪ್ರೀಯಪ್ರಾಕ್ಕುಕರ್ಮವ ಕಳೆದು ಕಾಪಾಡಬೇಕೋ 2 ಮಧ್ವಮತ ಸಿದ್ಧಾಂತ ಪದ್ಧತಿಯ ತಿಳಿಸುತ್ತಬುದ್ಧಿಪೂರ್ವಕ ನಿನ್ನ ಗುಣರೂಪ ಕ್ರಿಯೆಗಳಾಶ್ರದ್ಧೆಯಿಂದಲಿ ಭಜಿಪ ಸದ್ಬುದ್ಧಿ ಪಾಲಿಸುತಮಧ್ವೇಶ ಇವನ ಹೃನ್ಮಧ್ಯದಲಿ ಪೊಳೆಯೋ 3 ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ದೇವಸರ್ವತ್ರ ಸರ್ವದಾ ತವಸ್ಮøತಿಯನಿತ್ತೂನಿರ್ವಿಘ್ನತೆಯಲಿವನ ಸಾಧನವ ಪೂರೈಸಿಅಸ್ವತಂತ್ರನ ಬಂಧ ಪರಿಹರಿಸಿ ಕಾಯೋ 4 ಭಕ್ತವತ್ಸಲನೆಂಬೊ ಬಿರಿದುಳ್ಳ ಶ್ರೀಹರಿಯೆಭೃತ್ಯನಿಗೆ ಬಪ್ಪ ಅಪಮೃತ್ಯು ಪರಿಹರಿಸೀಸತ್ಯ ಗುರು ಗೋವಿಂದ ವಿಠ್ಠಲನೆ ನೀನಿವಗೆನಿತ್ಯಾಯು ಪ್ರದನಾಗು ಎಂದು ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜಪತಿಯ ಪ ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ ||ದೀನನೊಬ್ಬನು ಬರಲು ದೋಷಿಯಾದವನೆಂದು ಆನನವ ತಿರುಹುವನೇ ಅವನಿಯೊಳಗೇ 1 ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ ||ಚೆನ್ನಿಗನೆ ಈ ಅಲ್ಪ ಪ್ರಾದೇಶಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ 2 ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ ||ಭಕುತ ಸುರಧೇನು ಗುರು ವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿಗರಿವುದು ಕರುಣದಲಿ 3
--------------
ಗುರುವಿಜಯವಿಠ್ಠಲರು
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ