ನಿಂದಾಸ್ತುತಿಗಳು
ಎನ್ನ ಕೈಬಿಡುವೆಯೇನೋ ಪ
ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು
ಭಾರ ನಿನಗಿರೆ ಅ.ಪ
ತಾಪಸಿಯಂತೆ ನಿನ್ನ ವಕ್ಷವನೊದ್ದು
ತಾಪವನು ತೋರ್ಪಿದೆನೇನೋ
ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ
ಭೂಪ ಶಿಶುಪಾಲನಂದದೆ ಬೈದೆನೇ
[ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ
ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1
ಜಾರಚೋರನು ನೀನೆಂದು ಯಶೋದಗೆ
ದೂರು ಹೇಳದೆನೇ
ಕೌರವನಂತೆ ಕಂಬಕೆ ಕಟ್ಟಿರೆಂದೆನೆ
ಸಾರಿದೆನೇನೋ ಸತ್ರಾಜಿತನಂತೆ
ಚಾರುರತ್ನವ ಕದ್ದ ಅಪರಾಧಿ ನೀನೆಂದು
ಆ ರುಕ್ಮನಂತೆ ನಾರಿಚೋರನೆಂದೆನೆ 2
ಪುರುಹೂತನಂತೆ ನಾನು ಮಳೆಯಕರೆದು
ಗಿರಿಯನ್ನು ಹೊರಿಸಿದೆನೇ
ಧರಣಿಯ ಬಲಿ[ಯಿಂದ ಬೇಡುತಲಿರುವಾಗ
ವರಮುನಿಯಂತೆ ಕಿಂಡಿಯ ಮುಚ್ಚಿದೆನೆ]
ನರನಂತೆ ರಥವ ನಡಸೆಂದು ಹೇಳಿದೆನೇನೋ
ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3