ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಯ್ಯಾಲೆ ಉತ್ಸವಗೀತೆ ಜೊ ಜೊ ಜೊ ಜೊ ಶ್ರೀರಂಗನಾಥ ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ. ಮಂಟಪವನು ಶೃಂಗರಿಸಿದರಂದು ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ ಕುಂಠವಾಸನ ಉಯ್ಯಾಲೆಮಂಟಪವನ್ನು ಭಂಟರು ಬಂದು ಶೃಂಗಾರ ಮಾಡಿದರು 1 ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ ತುಲಾ ಮಾಸದ ಆರುದಿವಸದಲ್ಲಿ ವಾರಿಜಮುಖಿಯರ ಒಡಗೊಂಡು ರಂಗ ವೈ ಯ್ಯಾರದಿಂದಲೆ ಬಂದನು ಮಂಟಪಕೆ 2 ಮತ್ತೆ ಮರುದಿನದೊಳಗಚ್ಚುತನಂತ ಕುತ್ತನಿಅಂಗಿ ಕುಲಾವಿ ಧರಿಸಿ ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ ಭಕ್ತವತ್ಸಲನಾಡಿದನುಯ್ಯಾಲೆ 3 ಮೂರುದಿವಸದಲಿ ಮುರವೈರಿ ತಾನು ಭಾರಿ ವಜ್ರದ ಮಕರಕಂಠಿಯಾ ಧರಿಸಿ ನೀರಜನೇತ್ರನು ನಿಗಮಗೋಚರನು ವೈ ಯ್ಯಾರದಿಂದಲಿ ಆಡಿದನುಯ್ಯಾಲೆ 4 ನಾಲ್ಕು ದಿವಸದಲಿ ನಂದನಕಂದ ನವ ರತ್ನದ ಮಕರಕಂಠಿಯಧರಿಸಿ ಧರಿಸಿ ನಾಗಶಯನನಾಡಿದನುಯ್ಯಾಲೆ 5 ಐದು ದಿವಸದಲಿ ಅಕ್ರೂರವರದಗೆ ಕರಿ ದಾದ ಕುಲಾವಿ ಕಲ್ಕಿಯ ತುರಾಯಿ ಗಂಡಭೇರುಂಡಪಕ್ಷಿಯ ಪದಕವನಿಟ್ಟು ಪುಂಡರಿಕಾಕ್ಪನಾಡಿದನುಯ್ಯಾಲೆ 6 ಆರು ದಿವಸದಲಿ ಅಂಗಜನಯ್ಯಗೆ ಕೂರೆ ಕುಲಾವಿ ವೈಯಾರದಿಂಧರಿಸಿ ಹಾರ ಮಾಣಿಕ ರತ್ನ ಸರಗಳಳವಡಿಸಿ ನೀರಜನೇತ್ರನಾಡಿದನುಯ್ಯಾಲೆ 7 ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ ಹಸ್ತದಿ ರತ್ನಹಾರ ಗಂಧವಿರಿಸಿ ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ ಬತ್ತವಳಿಸಿ ಬಂದ ಭಕ್ತವತ್ಸಲನು 8 ಓರೆಗೊಂಡೆಯ ವೈಯಾರದಿಂ ಧರಿಸಿ ನಾರಿಯರೆಡಬಲದಲಿ ಕುಳ್ಳಿರಿಸಿ ವಾರಿಜನೇತ್ರನು ನಡುವೆ ಕುಳ್ಳಿರಲು ವಾರಾಂಗನೆಯರೆಲ್ಲ ಪಾಡುತಿರಲು 9 ಅಷ್ಟಮ ದಿವಸದಿ ಅರ್ತಿಯಿಂದಲೆ ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು ಇಂದಿರೆ ರಮಣನಾಡಿದನುಯ್ಯಾಲೆ 10 ಎಡಬಲದಲಿ ಭಕ್ತರು ನಿಂತಿರಲು ಪಿಡಿದು ಚಾಮರ ವ್ಯಜನವ ಬೀಸುತಿರಲು ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11 ದಾಸರಿಸಂದವು ಧಗಧಗನುರಿಯೆ ಸಹ ಸ್ರ ಸೂರ್ಯನಂತೆ ಪದಕಗಳೊಳೆಯೆ ಲೇಸಾದ ರತ್ನದ ಪಾದುಕೆಯನು ಧರಿಸಿ ವಾಸುದೇವನು ಆಡಿದನುಯ್ಯಾಲೆ 12 ಇಂದಿರೆ ರಮಣ ಒಂಭತ್ತು ದಿನದೊಳು ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು ಬಂದು ಮಜ್ಜನವನ್ನು ಮಾಡಿ ವೆಂಕಟರಂಗ ಇಂದಿರೆಸಹಿತಲೆ ನಿಂದ ಹರುಷದಲಿ 13
--------------
ಯದುಗಿರಿಯಮ್ಮ
ಕೊಟ್ಟಿಗೋತ್ಸವ ಗೀತೆ ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ. ವಾಸುದೇವನ ಸಹಸ್ರಸ್ತಂಭಮಂಟಪವ ದಾಸರು ಬಂದು ಶೃಂಗಾರವ ಮಾಡಿ ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ ಲೇಸಾದ ಮೇಲುಕಟ್ಟುಗಳ ಕಟ್ಟಿದರು 1 ಸೃಷ್ಟಿಗೀಶ್ವರನಾದ ರಂಗನಾಥನಿಗೆ ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ ಭಟ್ಟರು ಓದಿ ಪೇಳಿದರು ಸಂಭ್ರಮದಿ 2 ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು ಅರ್ಜುನಸಖ ಸಂಭ್ರಮದಲಿ ಪೊರಟು ಸ್ವರ್ಗದ ಬಾಗಿಲೊಳಗೆ ತಾ ನಿಂದು ಮೂರ್ಜಗವೆಲ್ಲ ಮೋಹಿಸುತಲೆ ಬಂದು 3 ಮಂದಹಾಸದಲಿ ನಿಂದು ಮಂಟಪದಲಿ ಬಂದ ಆಳ್ವಾರರಿಗಾಸ್ಥಾನವಿತ್ತು ಚಂದದಿಂದ ದಿವ್ಯ ಪ್ರಬಂಧವ ಕೇಳಿ ಒಂದುಅಂಕಣ ಬಿಡದೆ ಬಂದ ಶ್ರೀರಂಗ 4 ಸಂಕ್ರಾಂತಿಯಲಿ ಶಂಕರನ ಪ್ರಿಯನು ಶಂಕೆ ಇಲ್ಲದೆ ಆಭರಣವನು ಧರಿಸಿ ಪಂಕಜಮುಖಿಯರೊಡಗೊಂಡು ಹರುಷದ ಲಂಕಾರವಾಗಿ ಬಂದನು ಮಂಟಪಕೆ 5 ಮತ್ತೆ ಮರುದಿನದಲ್ಲಿ ಭಕ್ತವತ್ಸಲನು ಮುತ್ತಿನಅಂಗಿ ಮುಂಡಾಸನಳವಡಿಸಿ ಮುತ್ತಿನಛತ್ರಿ ಚಾಮರ ಸೂರೆಪಾನದಿ ಮುತ್ತರಸಿಯ ಮಂಟಪಕೆ ನಡೆತಂದ 6 ಅರ್ಥಿಯಿಂಬಂದು ತಾ ಅಶ್ವವನೇರಿ ಮತ್ತೆ ಬೇಟೆಯಮೃಗವನೆ ಕೊಂದು ಸಂ ಕ್ರಾಂತಿಯ ಪಾರ್ವೇಟೆಯನಾಡಿ ಸಂತೋಷದಿ ಬಂದ 7 ನಾರಿವೇಷವ ಆಳ್ವಾರರಿಗೆ ಧರಿಸಿ ಪೇರಿಯ ತಾ ಬಿಟ್ಟು ತೇಜಿಯನೇರಿ ಚೋರತನವ ಮಾಡಿದ ಭಕ್ತರಿಗೆ ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8 ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ ಬಂದ ಆಳ್ವಾರರಿಗೆ ಮುಕ್ತಿಯನಿತ್ತು ಬಂದು ಆಸ್ಥಾನದಿ ನಿಂದ ಶ್ರೀರಂಗ 9 ಭಕ್ತರು ಮಾಡಿದ ಪ್ರಬಂಧವನೆಲ್ಲ ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ ರಥವನಿತ್ತ ಬ್ರಹ್ಮಾಂಡರೂಪ 10 [ಶೌ]ರಿಯು ತಾನಿರಲು ಮೇಘಮಂಡಲದಂತೆ ತೋರುವುದು ತಾರಕೆಯಂತೆ ಮೈಯುಡುಗೆ ವಾರಿಜನಾಭನ ಮುತ್ತಿನಂಗಿಯ ನೋಡು ವವರಿಗೆ ತಾ ಆನಂದವಾಗಿಹುದು 11 ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ ವಾರಿಜನೇತ್ರಗೆ ವಜ್ರದನಾಮವು ಧರಿಸಿದರು ಹೇಮದ ಪಾದಹಸ್ತಗಳ 12 ಮುತ್ತಿನಂಗಿಸೇವೆ ನೋಡಬೇಕೆನುತ ಹತ್ತುಸಾವಿರ ಪ್ರಜೆ ಬಂದು ನಿಂತಿರಲು ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ ಮುಕ್ತರಾದೆವೆಂದು ಭಕ್ತರು ನುಡಿದರು 13
--------------
ಯದುಗಿರಿಯಮ್ಮ
ಚೈತ್ರದುತ್ಸವ ಗೀತೆ ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ ಕಟ್ಟಿ[ದರು] ಕಂಕಣವನು ಸೃಷ್ಟಿಗೀಶ್ವರಗೆ ಪ. ಮೊದಲು ದಿವÀಸದಿ ಧ್ವಜಪಟವನೇರಿಸಿ ಸುರರು 1 ಯಾಗಶಾಲೆಯ ಪೊಕ್ಕು ಯಾತ್ರದಾನವ ಬೇಡಿ ಸೂತ್ರ ಧರಿಸಿದರು 2 ಸರ್ಪಮೊದಲಾದ ಅಲ್ಲಿರ್ಪ ವಾಹನವೇರಿ ಕಂ ದರ್ಪನಪಿತ ಬಂದ ಚಮತ್ಕಾರದಿಂದ 3 ಬೆಂಡಿನ ಚಪ್ಪರ ಬೆಳ್ಳಿಕುದುರೆಯನೇರಿ ಪುಂಡರೀಕಾಕ್ಷ 4 ರೇವತಿ ನಕ್ಷತ್ರದಲಿ ಏರಿ ರಥವನ್ನು [ತಾ] ವೈಯ್ಯಾರದಿಂದಲೆ ಬಂದ ವಾರಿಜನಾಭ 5 ಗೋವಿಂದ ಗೋವಿಂದಯೆಂದು ಪ್ರಜೆಗಳು [ತಾವಾ]ನಂದದಿಂದ ನೋಡಿ ಪಾಡುತ್ತ 6 ಗೋವುಗಾಣಿಕೆಯನ್ನು ಗೋಪಾಲರು ತಂದು ನೀ ಲಾವರ್ಣನಿಗಿತ್ತರು ನೇಮದಿಂ ಪೂಜೆಯ 7 ಧ್ವಜಮಂಟಪದಲ್ಲಿ ಹರಿಭಜನೆಗಳ ಮಾಡು[ತ್ತಿರೆ] ಭುಜಗಶಯನನು ವರವಿತ್ತು ಕಳುಹಿದನು 8 ಸಪ್ತಾವರಣವ ಸುತ್ತಿ ತೀರ್ಥವನಿತ್ತು ಅರ್ಥಿಯಿಂದಲೆ ಬಂದ ಭಕ್ತವತ್ಸಲನು 9 ಬೊಂಬೆ ಅಂದಣವೇರಿ[ದ] ಅಂಬುಜನಾಭ ಕುಂಭಿಣಿಗಧಿಕವೆಂತೆಂಬ ಶ್ರೀರಂಗ 10 ಚಿತ್ರರಥ[ದ] ವಿಚಿತ್ರಮೂರುತಿಯ ನೋಡಿ ಪ ವಿತ್ರರಾದರು ಧಾತ್ರಿ[ಯ] ಉತ್ತಮರೆಲ್ಲ 11 ಬಂದ ಪ್ರಜೆಗಳು ಎಲ್ಲ ಆನಂದದಿ ಪೋಗೆ ಬಂದು ಆಸ್ಥಾನದಿ ನಿಂದ ಶ್ರೀರಂಗ 12 ಸೃಷ್ಟಿಯಲಿ ಪುಟ್ಟಿದ ದುಷ್ಟಪ್ರಾಣಿಗಳ [ನೆಲ್ಲ] ಶ್ರೇಷ್ಠ ಮಾಡಲಿ [ನಮ್ಮ] ವೆಂಕಟರಂಗ 13
--------------
ಯದುಗಿರಿಯಮ್ಮ
ನಿನಗೆ ನಿನ್ನ ನಾಮ ಗುಣಗಳಿಂದರ್ಚನೆ ಗೈವೆನು ಸ್ವಾಮಿ ಪ ಎನಗೊಂದು ಪದಾರ್ಥವು ದೊರೆಯದು ಮನ್ಮನದಿ ನೀನೆ ನಿಂತು ಮಾಡಿಸನುದಿನಾ ಅ.ಪ ಧೇನುಸುವೆನು ವಾಙ್ಮಯನೆನ್ನುತ ಜೀವ ದೇವ ನಿನ್ನಾ ನಾನಾ ದಿವ್ಯ ಸ್ವರೂಪನೆನ್ನುತಾವಾಹನೆಯನುಗೈವೆ ಗಾನಲೋಲ ಗಂಗಾಜನಕನು ಎಂದಾನು ಪಾದ್ಯವನು ಸಮರ್ಪಣೆ ಮಾಳ್ಪೆನು 1 ಶರಣರಿಗಭಯವ ಕೊಡುವನೆಂದು ಅಘ್ರ್ಯಗಳ ಸಮರ್ಪಿಸುವೆನು ಪರಮ ಪವಿತ್ರನು ನೀನೆನ್ನುತಲಾಚಮನ ಮಾಡಿಸುವೆನು ಸಮರ್ಪಣೆಗೈವೆನು 2 ಹನುಮತ್ಪ್ರಿಯನಿಗೆ ದಿವ್ಯ ಚಂದನಾಕ್ಷತೆಗಳ ಧರಿಸುವೆನೂ ಮುದದಲಿ 3 ಭಕ್ತವತ್ಸಲನು ನೀನೆನ್ನುತ ಧೂಪವನೀವೆನು ಸ್ವಾಮಿ ಭವ ಭಯಹರ ನೀನೆಂದೂ ನಿತ್ಯತೃಪ್ತಗೆ ಮಹಾ ನೈವೇದ್ಯ ತಾಂಬೂಲವನೀವೆ ನೀರಾಜನವರ್ಪಿಸುವೆನು 4 ಸೇವೆಯ ಕೊಡೊ 5
--------------
ಗುರುರಾಮವಿಠಲ
ಪುಷ್ಪಸೇವೆಯ ಗೀತೆ ಪುಷ್ಪಸೇವೆಯ ನೋಡುವಾ ಬನ್ನಿರೆ ನ ಮ್ಮಪ್ರಮೇಯ ರಂಗನಾ ಪ. ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ. ಮೇಷರಾಶಿಗೆ ರವಿಯು ಬರಲು ವಾಸುದೇವ ಹರಿಯು ಆಗ ಬೇಸಿಗೆ ತಾಪವ ಪರಿಹರಿಸುವೆನೆಂದು ವಾಸನೆಗಂಧವ ಮೈಯೊಳು ಪೂಸಿದ 1 ಕರ್ಪೂರದ ಕಸ್ತೂರಿ ಗಂಧವ ತಂದು [ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು2 ಮರುಗ ಮಲ್ಲಿಗೆ ಜಾಜಿ ಮುಡಿವಾಳ ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ ಕಮಲ ಸಂಪಿಗೆ ಪುಷ್ಪಮಾಲೆಯ ಧರಿಸಿ ಪನ್ನೀರ ತಳಿದರಾಗ 3 ಪುಷ್ಪದ ದುಬಟಿಯನು ತಂದು ನಮ್ಮ ಸರ್ಪಶಯನನಿಗ್ಹೊದ್ದಿಸೆ ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ 4 ಪರಿಪರಿ, ವಾದ್ಯಂಗಳು ಭೋರಿಡುತಿರೆ ವರಾಂಗನೆಯರು ಪಾಡೆ ಸುರರು ಭೂಸುರ ನರರೆಲ್ಲರ ಕೂಡಿ ದೊರೆಯುಮಂಟಪಕ್ಕಾಗ ಪರಮಪುರಷ ಬಂದ 5 ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ ಎಲ್ಲರೊಡನೆ ಪೊರಟಿರೆ ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ 6 ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ ಚಿತ್ರದಿಂದಲೆ ಪೊರಟು ಉತ್ತರಕಾವೇರಿ ತೀರದ ಮಂಟಪದಲಿ ನಿಂದು ಭಕ್ತವತ್ಸಲನು ಮಜ್ಜನವ ಮಾಡಿದನಾಗ 7 ಮಕರಿ ಕಾಲ್ಪಿಡಿಯಲಾಗ ಮತಂಗ ವು ಕರೆಯೆ ನಿಮ್ಮನು ಅತಿ ವೇಗದಿಂದ ಚಕ್ರದಿ ನಕ್ರನ ಕೊಂದು ಕರಿಯ ರಕ್ಷಿಸಿ ಬಂದ ಕರುಣದಿಂದಲೇ ರಂಗ 8 ಕಲಿಯುಗದೊಳಗಿರುವ ಕರ್ಮಿಗಳನ್ನು ಸಲಹುವೆನೆಂದೆನುತಾ ಕರುಣದಿಂ ದಲೆ ಅರ್ಚಾವತಾರವ ಮಾಡಿ [ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ 9
--------------
ಯದುಗಿರಿಯಮ್ಮ