ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಸಾಗರ ವರಮುನಿಗಳ ಪ್ರಾಣ ಶರಣಜನರಾಭರಣ ನಮ್ಮ ಶ್ರೀ ಗುರುನಾಥ 1 ಮೂರುಮೂರುತಿನೀತ ಮೂರು ಲೋಕ ವಂದಿತ ಮೂರುಗುಣರಹಿತ ನಮ್ಮ ಶ್ರೀಗುರುನಾಥ 2 ನಂಬಿದವರ ಕಾವ ಹಂಬಲಿಸುವ ಜೀವ ಅಂಬುಜಾಕ್ಷನೆ ಶ್ರೀದೇವ ನಮ್ಮ ಶ್ರೀ ಗುರುನಾಥ 3 ಭಕ್ತವತ್ಸಲನೀತ ಭಕ್ತರ ಭಾವಪೂರಿತ ಶಕ್ತನಹುದಯ್ಯನೀತ ನಮ್ಮ ಶ್ರೀ ಗುರುನಾಥ4 ಇಹಪರ ನಮಗೀತ, ಸಾಹ್ಯದಲಿ ಸಮರ್ಥ ಮಹಿಪತಿ ಪ್ರಾಣನಾಥ ನಮ್ಮ ಶ್ರೀ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತವತ್ಸಲನೀತ ಶಕ್ತ ಸದ್ಗುರುನಾಥ ಸಕಲ ಸಮ್ಮತ ಏಕೋದೇವನೀತ ಧ್ರುವ ಬಲಿಯಬಾಗಿಲ ಕಾಯ್ದು ಒಲಿದ ಫಲುಗುಣಗೀತ ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ ಸಲಹಿ ಪಾಂಡವರ ರಕ್ಷಿಸಿದಾತ 1 ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ ನಷ್ಟಾಜಮಿಳನ ನಿಷ್ಠೆಮಾಡಿದಾತ ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ ಶಿಷ್ಟಜನಪಾಲಕ ಸೃಷ್ಟೇಶ 2 ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ ಮೂಲೋಕದೊಡೆಯ ಶ್ರೀಹರಿಯು ಈತ ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ ಕುಲಕೋಟಿ ಬಂಧು ತಾ ಬಳಗವೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು