ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ
ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ.
ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1
ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2
ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3
ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ
ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5
ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6
ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7