ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು