ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಧ್ರುವ ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
--------------
ಪ್ರಸನ್ನವೆಂಕಟದಾಸರು