ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ
ಏನಿದು ಸಾವಕಾಶ ಪ.
ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ-
ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ
ಎಂದೀ ಶ್ರುತಿ ಪುರಾಣಗಳ
ಆದರೆ ನನ್ನನು ಬರಿದೆ
ಇದು ರೀತಿಯೆ ನಿನಗೆ1
ಬಂದಡಿಗಡಿ ಇಡುತ
ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ
ಒಂದನಾದರು ಮನಕೆ
ಅಭಯವನಿತ್ತು ಪೊರೆದೆ
ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು
ಪಾಲಿಪರ ಕಾಂಬೆನೆಲ್ಲಿ 2
ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ
ಗಾಂಗೇಯ ನಗುತ
ಶೋಣಿತವ ಹರಿಸಲು
ನಿಯಮದ ತೊರಿದೆ
ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3