ಉತ್ಥಾನ ದ್ವಾದಶಿಯ ದಿವಸ
(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)
ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.
ಮಾನಿನೀಮಣಿ ಈತನ್ಯಾರೆ ಕರು
ಣಾನಿಧಿಯಂತಿಹ ನೀರೆ ಹಾ ಹಾ
ಭಾನುಸಹಸ್ರ ಸಮಾನಭಾಷಿತ ಮ-
ಹಾನುಭಾವನು ಸುಪ್ರವೀಣನಾಗಿಹ ಕಾಣೆ 1
ಭಯಭಕ್ತಿಯಿಂದಾಶ್ರಿತರು ಕಾಣಿ-
ಕೆಯನಿತ್ತು ನುತಿಸಿ ಪಾಡಿದರು ನಿರಾ-
ಮಯ ನೀನೇ ಗತಿಯೆಂದೆಲ್ಲವರು ಹಾ ಹಾ
ಭಯನಿವಾರಣ ಜಯ ಜಯವೆಂದು ನುತಿಸೆ ನಿ-
ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2
ಭೂರಿ ವಿಪ್ರರ ವೇದ ಘೋಷದಿಂದ
ಸ್ವಾರಿಗೆ ಪೊರಟ ವಿಲಾಸ ಕೌಸ್ತು-
ಚಾರುಕಿರೀಟಕೇಯೂರಪದಕಮುಕ್ತಾ
ಹಾರಾಲಂಕಾರ ಶೃಂಗಾರನಾಗಿರುವನು3
ಸೀಗುರಿ ಛತ್ರ ಚಾಮರದ ಸಮ
ವಾಗಿ ನಿಂದಿರುವ ತೋರಣದ ರಾಜ
ಭೋಗ ನಿಶಾನಿಯ ಬಿರುದ ಹಾ ಹಾ
ಮಾಗಧ ಸೂತ ಮುಖ್ಯಾದಿ ಪಾಠಕರ ಸ-
ರಾಗ ಕೈವಾರದಿ ಸಾಗಿ ಬರುವ ಕಾಣೆ4
ಮುಂದಣದಲಿ ಶೋಭಿಸುವ ಜನ
ಸಂದಣಿಗಳ ಮಧ್ಯೆ ಮೆರೆವ ತಾರಾ
ವೃಂದೇಂದುವಂತೆ ಕಾಣಿಸುವ ಹಾಹಾ
ಕುಂದಣ ಖಚಿತವಾದಂದಣವೇರಿ ಸಾ-
ನಂದದಿ ಬರುವನು ಮಂದಹಾಸವ ಬೀರಿ5
ತಾಳ ಮೃದಂಗದ ರವದಿ ಶ್ರುತಿ
ವಾಲಗ ಭೇರಿ ರಭಸದಿ ಜನ
ಜಾಲ ಕೂಡಿರುವ ಮೋಹರದಿ ಹಾಹಾ
ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-
ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6
ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ.
ಈತನೆ ಈರೇಳು ಲೋಕದ
ದಾತ ನಾರಾಯಣ ಮಹಾ ಪುರು-
ವಿನುತ ನಿ-
ರ್ಭೀತ ನಿರ್ಗುಣ ಚೇತನಾತ್ಮಕಅ.ಪ.
ಮಂದರ ಪೊತ್ತ
ಭೂನಿತಂಬಿನಿಯ ಪ್ರೀತ
ಮಾನವಮೃಗಾಧಿಪ ತ್ರಿವಿಕ್ರಮ
ದಾನಶಾಲಿ ದಶಾನನಾರಿ ನ-
ವೀನ ವೇಣುವಿನೋದ ದೃಢ ನಿ-
ರ್ವಾಣ ಪ್ರವುಢ ದಯಾನಿಧಿ ಸಖಿ 1
ವಾರಿಜಾಸವಾನವಂದಿತ ಶ್ರೀಪಾದಯುಗ್ಮವ
ತೋರಿಕೊಂಬುವ ಸಂತತ
ಕೇರಿಕೇರಿಯ ಮನೆಗಳಲಿ ದಿ-
ವ್ಯಾರತಿಯ ಶೃಂಗಾರ ಭಕ್ತರ-
ನಾರತದಿ ಉದ್ಧಾರಗೈಯಲು
ಸ್ವಾರಿ ಪೊರಟನು ಮಾರಜನಕನು 2
ಮುಗುದೆ ನೀ ನೋಡಿದನು ಕಾಣಿಕೆಯ ಕ-
ಪ್ಪಗಳ ಕೊಳ್ಳುವನು ತಾನು
ಬಗೆಬಗೆಯ ಕಟ್ಟೆಯೊಳು ಮಂಡಿಸಿ
ಮಿಗಿಲು ಶರಣಾಗತರ ಮನಸಿನ
ಬಗೆಯನೆಲ್ಲವ ಸಲ್ಲಿಸಿ ಕರುಣಾ
ಳುಗಳ ದೇವನು ಕರುಣಿಸುವ ನೋಡೆ3
ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ
ಗಡಣ ಓಲಗಕೆ ಇಮ್ಮಡಿಯು ಜನ-
ರೊಡಗೂಡಿ ಬರುತಿಹ ನಡೆಯು ಹಾ ಹಾ
ಮೃಡ ಸರೋಜ ಸುರಗಡಣ ವಂದಿತ ಕ್ಷೀರ
ಕಡಲ ಶಯನ ಜಗದೊಡೆಯನಹುದು ಕಾಣೆ1
ಮದಗಜಗಮನೆ ನೀ ಪೇಳೆ ದೇವ
ಸದನವ ಪೊರಡುವ ಮೊದಲೇ ಚಂದ-
ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ
ಮುದದಿಂದ ಬಾಲಕರೊದಗಿ ಸಂತೋಷದಿ
ಚದುರತನದಿ ಪೋಗುವನು ಪೇಳೆಲೆ ನೀರೆ2
ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ
ಶ್ರೀರಮಾಧವನ ಲೀಲೆ
ಘೋರ ದೈತ್ಯಕುಠಾರ ಲಕ್ಷ್ಮೀ
ನಾರಾಯಣನ ಬಲಕರ ಸರೋಜದಿ
ಸೇರಿ ಕುಳಿತ ಗಂಭೀರ ದಿನಪನ
ಭೂರಿತೇಜದಿ ಮೆರೆವುದದು ತಿಳಿ1
ದೊರೆಯು ಬರುವನು ಎಂದು ಎಲ್ಲರಿಗೆ ಗೋ-
ಚರಿಸುವನೊಲಿದು ಇಂದು
ತರ ತರದ ಆರತಿಗಳನು ನೀವ್
ಧರಿಸಿ ನಿಂದಿರಿಯೆಂದು ಜನರಿಗೆ-
ಚ್ಚರಿಗೆಗೋಸುಗ ಮನದ ಭಯವಪ-
ಹರಿಸಿ ಬೇಗದಿ ಪೊರಟು ಬಂದುದು
ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ
ಕಿರಣದಂತಿಹುದೆಲೆ ಬಾಲೆ ಸುತ್ತಿ
ಗೆರಕವಾಗಿಹುದು ಸುಶೀಲೆ ಆಹಾ
ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-
ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1
ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ
ದ್ವಾದಶಿಯೊಳಗೆ ಬಾಲೆ
ಮಾಧವನ ಪ್ರೀತ್ಯರ್ಥವಾಗಿ ಶು-
ಭೋದಯದಿ ಸಾಲಾಗಿ ದೀಪಾ
ರಾಧನೆಯ ಉತ್ಸಹದ ಮಹಿಮೆಯ
ಸಾದರದಿ ನೀ ನೋಡೆ ಸುಮನದಿ1
ನಿಗಮಾಗಮದ ಘೋಷದಿ ಸಾನಂದ ಸು-
ತ್ತುಗಳ ಬರುವ ಮೋದದಿ
ಬಗೆ ಬಗೆಯ ನರ್ತನ ಸಂಗೀತಾ
ದಿಗಳ ಲೋಲೋಪ್ತಿಯ ಮನೋಹರ
ದುಗುಮಿಗೆಯ ಪಲ್ಲಂಕಿಯೊಳು ಕಿರು2
ನಗೆಯ ಸೂಸುತ ನಗಧರನು ಬಹ
ಚಪಲಾಕ್ಷಿ ಕೇಳೆ ಈ ವಸಂತ ಮಂ-
ಟಪದಿ ಮಂಡಿಸಿದ ಬೇಗ
ಅಪರಿಮಿತ ಸಂಗೀತ ಗಾನ ಲೋ-
ಲುಪನು ಭಕ್ತರ ಮೇಲೆ ಕರುಣದಿ
ಕೃಪೆಯ ಬೀರಿ ನಿರುಪಮ ಮಂಗಲ
ಉಪಯಿತನು ತಾನೆನಿಸಿ ಮೆರೆವನು3
ಪಂಕಜಮುಖಿ ನೀ ಕೇಳೆ ಇದೆಲ್ಲವು
ವೆಂಕಟೇಶ್ವರನ ಲೀಲೆ
ಶಂಕರಾಪ್ತನು ಸಕಲ ಭಕ್ತಾ
ಕರ ಚ
ಕ್ರಾಂಕಿತನು ವೃಂದಾವನದಿ ನಿ
ಶ್ಯಂಕದಿಂ ಪೂಜೆಯಗೊಂಡನು4
ಕಂತುಜನಕನಾಮೇಲೆ ಸಾದರದಿ ಗೃ-
ಹಾಂತರಗೈದ ಬಾಲೆ
ಚಿಂತಿತಾರ್ಥವನೀವ ಲಕ್ಷ್ಮೀ
ಕಾಂತ ನಾರಾಯಣನು ಭಕುತರ
ತಿಂಥಿಣಿಗೆ ಪ್ರಸಾದವಿತ್ತೇ-
ಕಾಂತ ಸೇವೆಗೆ ನಿಂತ ಮಾಧವ5