ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ. ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1 ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2 ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3 ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4
--------------
ವೀರನಾರಾಯಣ
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ. ಬೇಡಿಕೊಳ್ಳುವ ನಾವು ಅ.ಪ. ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ 1 ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ 2 ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ 3 ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] 4 ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ 5 ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ 6 ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ 7
--------------
ಯದುಗಿರಿಯಮ್ಮ
ವೈಶಾಖದುತ್ಸವ ಗೀತೆ ವರ್ಣಿಸಲಳವೆ ವೈಶಾಖದುತ್ಸವವಾ ಪ. ವೃಷಭಸೇರಿದ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ ಯರ್ಸಹಿತ ದಿಟ್ಟತನದಲಿ ಪೊರಟು ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ 1 ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ ಬಂದ ಅರ್ಜುನ ಸಾರಥಿಯು 2 ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ ಪುರುಷನು ಬರುವ ಪರಿಯನೇನೆಂಬೆ 3 ದಂತದ ಉಯ್ಯಾಲೆಮಂಟಪದಲಿ ನಿಂದು ಕಂತುಪಿತ ಕರ್ಪೂರದಚೂರ್ಣದಲಿ ಮಿಂದು ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ ಕಾಂತನು ನಡೆತರುವ ಪರಿಯನೇನೆಂಬೆ 4 ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು ಛಂದದಿಂ ರಂಭೆಯರ ಕೋಲಾಟಗಳ ನೋಡಿ ಇಂದಿರೆಯಿದಿರು ಮಂಟಪಕೆ ನಡೆತಂದ 5 ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು 6 ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ ಮುತ್ತಿನಾ ಹಾರವನು ಹಾಕಿ ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ 7 ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು ರತ್ನದಾ ಹಸ್ತದಲಿ ಅಭಯವನು ಕೊಟ್ಟು ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ 8 ಹತ್ತಿ ಹಯವನು ರಂಗ ಒಂಭತ್ತು ದಿನದಲಿ ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು ಅರ್ತಿಯಿಂ ಬಂದ ನೀರಾಳಿಮಂಟಪಕೆ 9 ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ ಬಂದು ಕಂಕಣವನ್ನು ಬಿಚ್ಚಿ ಆ ಘೃತ ಚೂತಫಲಗಳ ಸವಿದು ನಿಂದ ವೆಂಕಟರಂಗ [ಕರುಣಾಂತರಂಗ] 10
--------------
ಯದುಗಿರಿಯಮ್ಮ
ಶಯನ ಸಮಯಕಂ||ಸಂದಣಿ ಹರೆಯದೆ ಭಕ್ತರವೃಂದವು ಕೈವಾರಿಸುತ್ತ ಬರಲೆಡಬಲದೊಳ್‍ಇಂದಿರೆ ಧರಣಿಯು ಸಹಿತಾಮಂದಸ್ಮಿತಮುಖನು ನೋಡುತೈತಹನೊಲವಿಂದೇವ ಶಯನಕೆ ಬರುವ ಸಮಯ ಬಳಿಕೀಗದೇವತೆಗಳೆಲ್ಲರನು ಕಳುಹಿ ನಿಜ ಮಂದಿರಕೆ ಪಶ್ರೀದೇವಿ ಭೂದೇವಿಯರು ತಮ್ಮ ಕರಗಳಲಿಆದಿಪುರುಷನ ಕರಗಳನು ಪಿಡಿದು ಮುದದಿಮಾಧವನ ಮುಖಪದ್ಮವನು ನೋಡಿ ಹರುಷದಲಿವೇದವೇದ್ಯನ ಪೀಠದಿಂದಿಳಿಸಿ ತರುತಿಹರು 1ಸನಕಾದಿ ಭಾಗವತ ಮೂರ್ತಿ ತಾನಿದಿರಿಟ್ಟು ಮತ್ತೀಗಮನದೊಳಗೆ ನೆಲಸುವಂದದಿ ಮುಂದೆ ನಿಂದಿಹನು 2ತನ್ನಿಂದ ನಿರ್ಮಿಸಿದ ಫಲಪತ್ರಗಳಮನ್ನಿಸುತ ಭಕ್ತಿಯಲಿ ಭಕ್ತರಿತ್ತುದನುಉನ್ನತದ ಪದವಿಯನು ಬಳಿಕಿತ್ತು ಬರುತಿಹನುಪನ್ನಗಾರಿಧ್ವಜನು ತಿರುಪತಿಯ ವೆಂಕಟನು 3ಓಂ ವೇಣುನಾದ ವಿಶಾರದಾಯ ನಮಃ
--------------
ತಿಮ್ಮಪ್ಪದಾಸರು