ಬೆಳಗುವಾರತಿ ಬನ್ನಿ ಲಲನೆಯರೆಲ್ಲರು|
ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ಪ
ಮಲ್ಲಯುದ್ದವನೆ ಮಾಡಿ ಮಾವ ಕಂಸನ ಕೊಂದು
ಇಳೆಯೊಳು ಜಯವರಿಸಲು ನಡೆತಂಡನು 1
ದುಷ್ಟಬುದ್ದಿಯನ್ನುಳ್ಳ ಜಟ್ಟೇರ ಮಡಹಿಸಿ|
ಸೃಷ್ಟಿಯ ಭಾರನಿಳಹಿಸಿ ಶಿಷ್ಟರ ಕಾಯ್ದನು 2
ಗಂಡರ ಗಂಡ ಪ್ರಚಂಡನಾಗಿ ಮೆರೆದನು|
ಕುಂಡಲ ಭೂಷಿತ ಗಂಡ ಕಪೋಲಾ 3
ವರ ಉಗ್ರಸೇನಗ ಅರಸುತನವನಿತ್ತಾ|
ಗುರು ಮಹಿಪತಿ ಸುತ ಪೊರೆವ ಶ್ರೀ ಅರಸಗೆ4