ಎಲೆ ಮನಸೆ ಎಲೆ ಮನಸೆ ಹರಿಪಾದ ನಂಬು
ಸುಲಭ ಭಕ್ತರಿಗಾತ ಕೊಡುವ ನಿನಗಿಂಬು ಪ
ಕುಲಹೀನನೆನಬೇಡ ಹಳಿದುಕೊಳ್ಳಲಿ ಬೇಡ
ತಿಳಿಗೇಡಿಯೆನಬೇಡ ಕಳವಳಿಸಬೇಡ
ಮಲಿನವೆಂದೆನಬೇಡ ಜಳಕ ಮಡಿಯೆನಬೇಡ
ತಿಳಿದು ಭಜಿಪರ ಬೆಂಬಲನು ನಾನೆಂಬ 1
ವಿಪಿನ ಸೇರಲಿಬೇಡ
ಕೌಪೀನ ಬೇಡ
ಕಪಟಬುದ್ಧಿಯ ಬಿಟ್ಟು ಸಫಲ ಮಾನಸದಿಂದ
ಆಪತ್ತು ಬಂಧುಯೆನೆ ಕೃಪೆಮಾಡ್ವ ಬಂದು 2
ದಾನಧರ್ಮವು ಬೇಡ ನಾನಾ ಕರ್ಮವು ಬೇಡ
ಮೌನದೊಳಿರಬೇಡ ಏನುವ್ರತಬೇಡ
ಧ್ಯಾನದಾಯಕ ಎನಗೆ ನೀನೆ ಗತಿಯೆಂದೆನಲು
ದೀನದಯ ಶ್ರೀರಾಮ ಮಾಣದೆ ಕಾಯ್ವ 3