(3) ರೇವಣ್ಣ ಸಿದ್ದೇಶ್ವರ ಯತಿಗಳು ಬೆಂಗಳೂರು ಭೇಟಿ
ಯೋಗಿಶೇಖರನಾಗಿ ಬೆಳಗುವ ಜಗದೊಳಗೆ ತಾ ನಿಜ ಪ
ನಾಗಭೂಷಣನಡಿಗಳಂ ಪಿಡಿದಾಗ ಹೊಂದಿದನದ್ವಯಂ ಪದ
ಜೋಗಿ ಜಂಗಮದೊಡೆಯ ನಮ್ಮಯ ರೇವಣಾಶಿದ್ಧೇಶ್ವರನೆ 1
ತಾನಿಹ ಶೈವಗಿರಿಯೊಳು
ದೀನಜನಮಂದಾರ ಮುನಿಮಹ 2
ಅಂತರಾತ್ಮನೊಳಿಂತು ಹೊಂದಿಪ
ರೆಂತು ಲೋಕೋಪಕಾರ ರಾಗಿಯು
ಅಂತು ದಯಮಾಡಿರುವ ನೋಡಿ ಅ
ನಂತ ಮಹಿಮನೆ ರುದ್ರಮುನಿ 3
ತತ್ಸ್ವರೂಪನು ತೋರಿ ಭುವನಕೆ
ಸತ್ಸಹಾಯಕನಾದ ನಮ್ಮಯ
ಮತ್ಸ್ಯಮೂರುತಿ ಪ್ರಿಯನೆ ಮುನಿಮಹಾ 4
ತಿರ್ಗಿ ಲೋಕಕೆ ಬಾರದಂದದಿ
ಸ್ವರ್ಗಲೋಕದೊಳಿರುವ ಮುನಿಮಹಾ 5
ಭುವನದೊಳಗವತರಿಸಿಯಿರುತಿಹ
ಸುಮನ ಸತ್ಯಸಮಾಜ ಭೋಜನೆ ತಾ
ನಿವನೆನೆ ಹೊಳೆವ ಮುನಿಮಹಾ 6
ಬರುವ ಭಕ್ತರಿಗಾಗಿ ತನ್ನೊಳ
ಗಿರುವ ಪರತತ್ವವನು ಭಕ್ತರ
ಕರದುಕೊಡುವುದು ಕಂಡುಕೊಳ್ಳಿರೊ
ತರುಣಿಮಣಿಯನು ಧರಸಿ ಧರೆಯೊಳು 7
ಪ್ರಣವಲಿಂಗದೊಳೈಕ್ಯಮಾಗುವ
ಕಂಚಿವರದನ ಪ್ರೀಯನಾಗಿಯು 8