ಬಂದ ಶ್ರೀಹರಿ ದಯದಿಂದ ಆನಂದದಿಂದ ಪ
ಗಂದಿಯ ಪರಿಯಲಿ ಸಿಂಧುರ ವರದನು
ಎಂದೆಂದಿಗು ನಿಜ ಬಂಧುವೆಂದೆನಿಪ ಪೂ
ರ್ಣೆಂದುವದನ ಗೋವಿಂದ ಮುಕುಂದ ಅ.ಪ.
ಭಕ್ತರ ಅವರಸಕೆ ಸಿದ್ಧ | ಭಕುತಿಗೆ ತಾ ಬದ್ಧ
ಮತ್ತನ್ಯ ಸಾಧನಕೆ ಆಗಮಬಾಧ್ಯ | ಭಕ್ತರಿಗದು ವೇದ್ಯ
ಭಕ್ತರ ಪೊರೆಯಲು ಅತ್ಯಾದರದಲಿ
ಹತ್ತವತÁರವ ಎತ್ತಿದ ಶ್ರೀ ಪುರು
ಷೋತ್ತಮ ಜಗದುತ್ಪತ್ತಿ ಸ್ಥಿತಿ ನಿಲಯ
ಕರ್ತೃ ಕೃಪಾಕರ ಕರಿಗಿರೀಶನು 1