ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿದವರಿಗೆ ದೊರೆವುದೇನೆಲೊ ಸಜ್ಜನರ ಸಂಗ ಬೇಡಿದವರಿಗೆ ದೊರೆವುದೇನೆಲೊ ಪ ಬೇಡಿದವರಿಗೆ ದೊರೆವುದೇನೆಲೊ ಗಾಢಮಹಿಮನ ಭಕ್ತರಾವಾಸ ಸುಕೃತ ಫಲವು ಕೂಡಿಬಂದ ಕೋವಿದರಿಗಲ್ಲದೆ ಅ.ಪ ದೃಢಕರಡಿಯಿಟ್ಟ ಭುವನವೆ ಕ್ಷೇತ್ರ ದೃಢಕ ಜನರಡಿಯೇ ಸುಯಾತ್ರಾ ಸಿದ್ಧ್ದಾಂತ ಮಾತಿದು ದೃಢಕರಾಡಿದ ಮಾತೆ ನಿಜಮಂತ್ರ ಇದೆ ಮೂಲಶಾಸ್ತ್ರ ದೃಢಕರು ನಿಂತ ಸ್ಥಳವೆ ಬದರಿ ದೃಢಕರು ಕೂತಸ್ಥಾನ ಮಧುರೆ ದೃಢಕರೊಟನಾಟ ಲಭ್ಯವೆಂದರೆ ಪಡೆದ ಪುಣ್ಯ ಮಹಭಾಗ್ಯಗಲ್ಲದೆ 1 ಭಕ್ತ ಜನಮಿಂದದೆ ತೀರ್ಥವು ನಿಖಿಲರರಿವುದೆ ಭಕ್ತ ಜನರುಂಡಸ್ಥಳ ಸಿರಿಯಾವಾಸವು ದೊರೆಯದಾರಿಗೆ ಭಕ್ತ ದರ್ಶನ ಪರಮ ಮಂಗಲವೋ ಶುಭಕೆ ಶುಭಕರವು ಭಕ್ತಜನರಿಹ್ಯ ಸಭೆಯೆ ಹರಿಸಭೆ ಭಕ್ತರೊಪ್ಪಿಗೆ ಹರಿಯ ಒಪ್ಪಿಗೆ ಮೃತ್ಯುದೂರ ಮಾಳ್ಪ ಸರ್ವೋತ್ತಮನ ಭಕ್ತರ ಪ್ರೇಮದೊಲುಮೆ 2 ದಾಸರ್ವಾಸವೆ ಕಾಶಿಕೇಂದ್ರವು ಸತ್ಯ ಸತ್ಯವಿದು ದಾಸರಿರುವುದೆ ಪರಮ ವೈಕುಂಠವು ಮತ್ರ್ಯರರಿವುದೆ ದಾಸಗಿತ್ತದ್ದು ಹರಿಗೆ ಅರ್ಪಣವು ಪರಮ ಸುಖಕರವು ದಾಸರೊರ್ಣವು ತೀರದಾರಿಗೆ ಶ್ರೀಶ ಶ್ರೀರಾಮನಡಿಯಕಮಲ ದಾಸರಿಜನರಡಿ ಪಿಡಿದು ಸುಸಹ ವಾಸದಿರುವುದೆ ಮುಕ್ತಿಸಂಪದ3
--------------
ರಾಮದಾಸರು
ಸರ್ವಾಂತರ್ಯಾಮಿ ಸರ್ವೇಶ ಬಾರೊ ಸರ್ವಸ್ವತಂತ್ರನೆ ಸರ್ವಭಯನಾಶ ಪ ಸರ್ವತಂತ್ರನೆ ಸರ್ವವೇದದಿ ಸರ್ವತತ್ತ್ವದಿ ಸರ್ವಸಾಕ್ಷಿ ನೀ ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ ಜಡಬೊಂಬೆ ನಾಟಕರಚಿಸಿ ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ ಕಡುಗೌಪ್ಯದದರೊಳು ನೆಲೆಸಿ ನೀನೆ ಅಗಣಿತ ಕಲ್ಪನೆವೆರಸಿ ಜಡಕೆ ಜಡವಾದ ತೊಡರಿನಾಟದ ಕೆಡಕು ತಪ್ಪಿಸಿ ಪಿಡಿದು ಎನ್ನನು ಒಡೆಯ ನಿನ್ನಡಿ ಭಕ್ತರಾವಾಸ ದಿಡು ಎಂದೆರಗುವೆ ಪಾಲಿಸಭಯ 1 ನಾನಾವಿಧದ ಸೃಷ್ಟಿಗಳ ಸೃಜಿಸಿ ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ ಏಳು ಮೋಹವ ತುಂಬಿದೆಲ ಪುಸಿ ಕಾಣದಂತೊಗೆದಿ ಮಹಾಮಾಯದ ಜಾಲ ನಾನು ನೀನೆಂಬ ಜಾಣರೆಲ್ಲ ಬಿದ್ದು ಏನುಕಾಣದೆ ತ್ರಾಣಗೆಟ್ಟರು ಹೀನಮತಿ ನಾನೇನು ಬಲ್ಲೆನು ನೀನೆ ಸಲಹೆನ್ನ ದೀನರಕ್ಷಕ 2 ಪಾವನ ಪರಮಪ್ರಕಾಶ ದೇವ ಭಾವಜನಯ್ಯ ನಿಜಭಾವಿಗಳರಸ ಕೇವಲಸುಗುಣಾಂತರ್ವಾಸ ನಿನ್ನ ಸೇವಕನೆನಿಸೆನ್ನ ಕಾಯೊ ನುತಪೋಷ ಜೀವಜೀವರಜೀವ ಚೈತ್ಯನದೇವ ದೇವರ ದೇವ ನಂಬಿದೆ ಜಾವ ಜಾವಕೆ ಒದಗುತಿಹ್ಯ ಮಹ ನೋವು ಗೆಲಿಸೆನ್ನಯ್ಯ ಶ್ರೀರಾಮ 3
--------------
ರಾಮದಾಸರು