ಶ್ರೀ ರಾಘವೇಂದ್ರ ಗುರುರಾಜ ಶ್ರೀ ಗುರುರಾಜ |
ಶ್ರೀಗುರುರಾಜ ಬಾರೈ | ಭಕ್ತರಾಮರ ಭೋಜ ಶ್ರೀಗುರುರಾಜ ಪ
ಮಂಗಳಮಹಿಮನಿ ಸಂಗೀತ ಪ್ರಿಯನೆ |
ಅಂಗಜದೂರನೆ ಯತಿವರನೆ 1
ಶೃಂಗಾರ ವೃಂದಾವನ ನಿಲಯ | ಡಿಂಗರ ಪಾಲ
ಕವಿಗೇಯ | ಶ್ರೀ ರಾಘವೇಂದ್ರ ಶ್ರೀಗುರುರಾಜ 2
ಶ್ರೀ ಶಾಮಸುಂದರ ಪ್ರಿಯದಾಸ | ಕ್ಲೇಶನಾಶನ |
ವ್ಯಾಸಾರ್ಯನತಪೋಷ | ದೈಶಿಕನಾಥ |
ಭಾಸುರಚರಿತ | ವರಕಾಷಾಯ ಭೂಷಿತ ಮಾಂಪಾಹಿ 3