ನೇಮದಿಂದ ಹರಿಯಭಜಿಸಿ ಪ್ರೀತಿಯಿಂದಲಿ
ಕಾಮಿತಾರ್ಥ ಫಲಗಳೀವ ಕರುಣದಿಂದಲಿ ಪ
ಜಲದಿ ಬಂಧಿಸಿ ಲಲನೆ ತಂದ ಜಾನಕೀಪತಿ
ಜಲಧಿಶಯನನಾದ ನಮ್ಮ ವಿಷ್ಣು ಮೂರುತಿ
ನಳಿನನಾಭನಾದ ರಕ್ಷಕನಾದ ಶ್ರೀಪತಿ
ಒಲಿದು ಮನದಿ ಸ್ಮರಿಸುವರಿಗರಂದೆ ಸದ್ಗತಿ 1
ಇಂದಿರೇಶ ವಿಬುಧ ವಂದ್ಯ ವಿಶ್ವಕುಟುಂಬಿ
ಮಂದರಾದ್ರಿ ಗಿರಿಯ ಪೊತ್ತ ಮಹಿಮನೇನೆಂಬೆ
ಕುಂದು ಇಲ್ಲದ ಹೃದಯದಲ್ಲಿ ಕೃಷ್ಣನ ನೇನೆಂಬೆ
ಕೈವಲ್ಯ ಕೈಕೊಂಬಿ 2
ಅಖಿಲ ಲೋಗಳನೆ ಆಳುವ ಅಧಿಕ ಸಂಪನ್ನಾ
ಮುಕುತಿದಾಯಕ -----ಮೋಕ್ಷದಾತನಾ
ನಿಖರವಾಗಿ `ಹೆನ್ನ ವಿಠ್ಠಲ' ನೆಂದು ತಿಳದಿನ್ನುಭಕುತಿಯಿಂದ ಹಾಡಿ ಪಾಡುವ ಭಕ್ತರಾಧೀನಾ 3