ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ.
ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ.
ಹಿಂದೇಸು ಜನ್ಮಗಳು ಬಂದು ಪೋದವು
ಒಂದು ತೃಣವಾದರೂ ನಾ ಗಳಿಸಲಿಲ್ಲ
ಮುಂದಿನ ಗತಿಯು ತಿಳಿಯದು
ಬಿಂದು ಮಾಧವಾ ಯಾದವಾ 1
ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ
ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ
ಪಾದಸ್ಮರಣೆ ಮಾಡಿಸುವ ಬಾರಾ
ಉದಾರ ಭಕ್ತರಾಧಾರಾ 2
ಯೆಷ್ಟು ಪೊಗಳಿದರು ನಿನ್ನ ಕರುಣಕೆ
ಇನ್ನು ಕೇಡು ಉಂಟೇ ಸ್ವಾಮಿ
ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ
ದುಷ್ಟ ಅಘರಾಶಿ ದೂರ ಮಾಡೋ
ಕಣ್ತೆರೆದು ನೋಡೋ ಕಾಳಿಮರ್ಧನ
ಕೃಷ್ಣನೆ ಮಧ್ವಮುನಿ ಪ್ರಿಯನೆ 3