ಸುಮ್ಮನೆ ಹೊಗಳಿದರ್ಯಾತಕೀತನ ಪರ
ಬ್ರಹ್ಮ ಪರಮಾತ್ಮೆಲ್ಲ್ಹಾನ ಪ
ರಮ್ಮೆ ಮಾಡಿ ಬಲುಜಮ್ಮಾಸಿ ಮನುಗಳು
ದಿಮ್ಮಾಕಿನಿಂದ ವೇದಸ್ಮøತಿಯನ್ನು ಅ.ಪ
ಎಲ್ಲಿ ಕರೆಯಲಿಲ್ಲ್ಯಾನಂತೆ ಸುಳ್ಳೆ
ಸಲ್ಲದ ಮಾತ್ಹೇಳಿಹ್ಯರಿಂತೆ
ಸೊಲ್ಲು ಸೊಲ್ಲಿಗೆ ನಾನೆಲ್ಲೆಲ್ಲಿಕೂಗಲು
ಕಲ್ಲಿಗು ಕಡೆಯಾಗಿರುವ ಪುಲ್ಲನಾಭ 1
ಹೊತ್ತುಕೊಂಡು ಇರುತಿಹ್ಯನಂತೆ
ಅರ್ತುಕೊಂಡು ನಾ ನಿರ್ಕಾಗಿ ಭಜಿಸಲು
ಸಾರ್ಥಕಮಾಡವಲ್ಲ ಕರ್ತನೆಂಬಂಥವ 2
ಮೊರೆಯಿಟ್ಟು ಭಕ್ತರಪ್ರಿಯಬಂಧು ಮಹ
ಕರುಣಾಳು ಶ್ರೀರಾಮನೆ ಎಂದು
ಪರಿ ಸ್ಥಿರವಾಕ್ಯವೇ
ನರಿತು ಪೊಗಳಿದರು ಪರಮ ಪಾವನರು 3