ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ಪ ತಿಳಿಯ ಬಲ್ಲೆನೆ ನಿನ್ನ ನಳಿನಭವಾದ್ಯರಿ ಗಳವಡಿಯದ ಪಾದ ಪಾದ ಭಜನೆ ಬೇಡಿದೆ ಕೃಪಾಸಿಂಧು ನಂಬಿದೆ ನಿನ್ನ ಸುಜನವಾರಿಧಿ ಶರದೇಂದು ಪಾಲಿಸು ಎನ್ನ ನಿಜವಾಗಿ ಪೇಳುವೆ ವೃಜಿ£ಮರ್ದನನೆಂದು 1 ಎಡಬಲದಲಿ ನಿನ್ನ ಮಡದೇರ ಒಡಗೂಡಿ ಒಡಲನಾಮಕವಾಗಿ ಒಡಲೊಳಿದ್ದನ್ನವ ವಡಬಾಗ್ನಿಯೊಳುನಿಂತು ಜಡÀಜಸಂಭವಸುರ ಗಡಣ ಕೆ ನೀಡುತ್ತಾ ಒಡೆಯನೆನಿಸಿ ಭವ ನಿತ್ಯ ಒಡೆಯ ಪುಷ್ಕÀರಣಿಕೂಲನಿಲಯ ಜಗ ದ್ವಡೆಯ ಎನ್ನನು ಪೊರೆ ತಡವ್ಯಾಕೊ ಸಿರಿಲೋಲ2 ಸಿದ್ಧರಾಮಶೆಟ್ಟಿ ಶುದ್ಧಸ್ವರೂಪನೆ ಮುದ್ದುಮೋಹನ ಮುಖಕೆ ತಿದ್ದಿತೀಡಿದನಾಮ ಶುದ್ಧ ಭಕ್ತರನ್ನೆಲ್ಲ ಮುದ್ದುಗೊಳಿಸುವಂಥ ಮುದ್ದಾದ ಮುಖದಲ್ಲಿ ಎದ್ದು ಕಾಣುವ ನಗೆ ಪೊದ್ದುಕೊಂಡಿಹ ನಾನಾ ಆಭರಣದಿಂದಲಿ ಎದ್ದು ಬರುವ ನಿನ್ನ ಪ್ರದ್ಯೊತನಿಭ ಮೂರ್ತಿ ವಾಸುದೇವ ಮದ್ಹøದಯಗತಬಿಂಬ ಸಿದ್ಧಗುರುಜಗನ್ನಾಥ ವಿಠಲರೇಯ 3
--------------
ಗುರುಜಗನ್ನಾಥದಾಸರು
ಕಾಯೊ ಕರುಣಾಕರನೆ ನೀಯನ್ನಾ ಕಾಯೋ ಆನಾಥರಕ್ಷಕ ದಯಾಸಿಂಧೂ ಪ. ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ. ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 1 ತರುಳ ಕರಿಯಲು ಕಂಭದಿ ಬಂದು ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ ನರಮೃಗರೂಪಿನಲಿ ಪ್ರಹ್ಲಾದಗೆ ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 2 ಜಲದೊಳಗೆ ನೆಗಳೆಯು ಹಿಡಿದು ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು ನಿಲ್ಲದೆ ಬಂದೊದಗಿನೆಗಳೆಯನು ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ 3 ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ ದೇವರದೇವ ಶ್ರೀ ವೆಂಕಟೇಶ್ವರನೆ 4 ಶಂಖಚಕ್ರಧರ ನಿನ್ನ ಚರಣವನು ನಂಬಿದೆ ಪಕ್ಷಿವಾಹನಸ್ವಾಮಿ ಕರುಣಾನಿಧೆ ಹೆಳವನಕಟ್ಟೆಯೊಳು ನಿಂದು ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ 5
--------------
ಹೆಳವನಕಟ್ಟೆ ಗಿರಿಯಮ್ಮ