ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ.
ಮಕರಕುಂಡಲಧರ ವಿಕಸಿತ ಮುಖಪದ್ಮ
ಕೌಸ್ತುಭ ಶುಭ ವನಮಾಲಿ
ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ
ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1
ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು
ಬಿಡನೆಂದು ಭವಸಿಂಧು ಪೊತ್ತನಿಂದು
ತಡವ ಮಾಡದಲೆ ಸಂಗಡ ಬಂದೀ ನಿಲಯದಿ
ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2
ತುಳಸಿಧಾಮ ಸುಶೋಭಿತ ನಮಗೆ ಬೆಂ-
ಬಲವಾಗಿರುವ ಸರ್ವ ಸ್ಥಳಗಳಲಿ
ಅಲಸನಾಗದೆ ಶೇಷಾಚಲವಾಸನು ಶ್ರೀಭೂ-
ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3