ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಇಂದು ಕಾಯಲಿಬೇಕೊ ಸುಂದರ ಧನ್ವಂತ್ರಿ ಇಂದಿರೆರಮಣ ಆನಂದ ಕೃಷ್ಣ ಪ. ತಂದೆ ಮುದ್ದುಮೋಹನ ಗುರುಗಳ ನೀನು ಚಂದದಿಂ ಪಾಲಿಸಿ ತಂದುಕೊ ಕೀರುತಿಅ.ಪ. ಬಂದಿತೊ ನಿನಗೊಂದು ಕುಂದು ಇದರಿಂದ ನಂದಕಂದನೆ ಕೃಷ್ಣ ಉಡುಪಿ ನಿಲಯ ಮಂದರೋದ್ಧರ ಕೃಷ್ಣ ಬಂದು ಈಗ ನೀ ಕಾಯೊ ಇಂದು ಬೇಡುವೆ ನಿನ್ನ 1 ಭವರೋಗ ಹರನಿಗೆ ಇದೊಂದಸಾಧ್ಯವೆ ತವಕದಿಂದಲಿ ಆಯುವಿತ್ತು ಕಾಯೊ ಪವನನಂತರ್ಯಾಮಿ ಭವಪಾಶಬದ್ಧರ ತವಕದಿಂದಲಿ ಕಾಯ್ವ ಗುರುಗಳಲ್ಲವೆ ಇವರು 2 ನಿನ್ನ ಆಜ್ಞೆಯಿಂದ ಭಕ್ತರನುದ್ಧರಿಸ ಲಿನ್ನು ಧರೆಗೆ ಬಂದವರಲ್ಲವೆ ಮನ್ನಿಸಿ ನೀನಾಯುರಾರೋಗ್ಯ ಭಾಗ್ಯವಿತ್ತು ಚನ್ನಾಗಿ ಕಾಯಬೇಕಿನ್ನು ಎನ್ನಯ ದೊರೆಯೆ 3 ಕಷ್ಟ ಬಿಡಿಸುವರಿಗೆ ಕಷ್ಟ ಕೊಡುವರೆ ನೀನು ಕಷ್ಟ ಪರಿಹಾರಕನೆಂದೆನಿಸಿ ಬಿಂಕ ಥಟ್ಟನೆ ಕಾಪಾಡೊ ಶ್ರೇಷ್ಠ ಗುರುಗಳ ಎಮ್ಮ ಕಷ್ಟ ಬಿಡಿಸುವರ 4 ಅನ್ನ ಪಾನವಿಲ್ಲದಿನ್ನು ಬಳಲಿಸುವರೆ ಚನ್ನವಾಯಿತು ಇದು ನಿನ್ನ ಘನತೆ ಸನ್ನುತ ಮಹಿಮ ಶ್ರೀ ಗೋಪಾಲಕೃಷ್ಣವಿಠ್ಠಲ ಇನ್ನು ಕಾಯದಿರೆ ಎನ್ನಾಣೆ ಬಿಡೆ ಕಂಡ್ಯಾ 5
--------------
ಅಂಬಾಬಾಯಿ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ