ಬಾರೈಯ್ಯಾ ಗೋವಿಂದಾ | ಕೀರ್ತನೆಗೆ ಮುಕುಂದಾ |
ಬೀರುತ ನಿಮ್ಮ ಮಹಿಮೆ ಸ್ವಾನಂದ ಪುರದಿಂದಾ ಪ
ಕೋಂಡಾಡುವಂತೆ ಕೀರ್ತಿ ನೀಡಬೇಕು ನಿಜಸ್ಪೂರ್ತಿ |
ಮಂಡೀಸಿ ಭಕ್ತರಂಗಾ ಹೇಳುವೆ ನಿಮ್ಮ ವಾರ್ತೆ 1
ವೈಕುಂಠ ಯೋಗಿವರಿಯಾ ಸ್ಥಳಸುರ ಮುನಿರಾಯಾ |
ನೀ ಕರಿಸಿ ಪಾಡುವಲ್ಲಿ ಇಹನೆಂದೆ ನಿಶ್ಚಯಾ 2
ಕಂದನ ತೊದಲು ಮಾತಾ ಕೇಳಿ ಹಿಗ್ಗುವಂತೆ ಮಾತಾ |
ತಂದೆ ಮಹಿಪತಿ - ಸ್ವಾಮಿ ಬಲವಾಗೋ ಶ್ರೀ ಕಾಂತಾ3