ಶ್ರೀಕರ ನೀನೆ ಗತಿಯಲ್ಲದೆ ಬ್ಯಾರಾಕರವಿಲ್ಲ ಕೃಪಾಕರನೆ
ದುರಿತ ನಿರಾಕರಿಸಯ್ಯ ಪರಾಪರನೆ ಪ.
ರಾಜಿಕ ದೈಹಿಕ ದೈವಿಕರೆಲ್ಲ ಮ-
ಹೋಜಸ ನಿನ್ನೊಶವಾಗಿಹವು
ಪೂಜಿಸದೆನ್ನ ಸಭಾಜಿಸು ಮಂಗಲ
ಭಾಜನ ಶತ್ರು ಪರಾಜಯ ಮಾಡಿಸು 1
ಹಲವಂಗದಿ ನಾ ಬಳಲುವ ಚಿಂತೆಯು
ತಿಳಿಯದೆ ಚಿನ್ಮಯ ಜಲಜ
ಸುಲಭದಿ ಸಂಪತ್ಫಲಗಳ ವರ್ಧಿಸಿ
ನೆಲೆದೋರೆನ್ನೊಳು ಸುಕಟಾ 2
ರೋಗಭಯಂಗಳ ನೀಗುತ ಭಕ್ತಮ-
ನೋಗತ ಫಲಸಂಯೋಗಗಳ
ಬೇಗದಿ ನೀಡು ಕರಾಗತ ಮಾಡು ಸು-
ನಾಗ ಗಿರೀಂದ್ರ ಸರಾಗ. . . . . . 3