ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ
ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ ತಾಯಿ ತಮ್ಮ ಪ.
ಚಿನ್ನದ ಸರಪಣಿಯ ಚೆಲುವ ಪೊನ್ನಮಣಿಯ
ರÀನ್ನದ ನೇಣ ತುದಿಯ ರಮಣಿಯರೆಲ್ಲರರ್ಥಿಯ1
ಈ ಮೈಯಲ್ಲಿ ಮಲಗಿಪ್ಪ ಈ ಮಹಾಲಕ್ಷ್ಮಿಯ ನೋಳ್ಪ
ಸನ್ಮೋದನೆನಿಪ ಶೇಷಶಯನನ ವಟತಲ್ಪ 2
ಇಂದಿರೆ ಇಷ್ಟವನೀವ ಇಂದಿರೆಗಿವನು ಧವ
ಎಂದೆಂದು ಭಕ್ತರ ಕಾವ ಎಸೆÉವ ಮಂಚದ ದೇವ 3
ಬಾರಯ್ಯ ಭಕ್ತರಬಂಧು ಬಾರಯ್ಯ ಕರುಣಾಸಿಂಧು
ಇಂದು ಬಾರಯ್ಯ ಮುಕುಂದನೆಂದು 4
ಕುಂಜರ ಕೂಗಲು ಬಂದೆ ಕೂಡೆ ಮಕರಿಯ ಕೊಂದೆ
ಕಂಜಾಕ್ಷ ಕಾಮನ ತಂದೆ ಕಾಯೆಂದು ಪಾಡಲು ಬಂದೆ 5
ಕಾಕರ ಗಂಟಲಗಾಣ ಕಾಮಿಸದೆನ್ನಯ ಮನ
ಏಕೋದೇವನೆಂಬ ಜಾಣ ಏರಿದ ಮಣಿಯ ನೇಣ 6
ಅಖಿಳ ಸುರರ ತಾತ
ರುಕುಮಿಣಿ ಪ್ರಾಣನಾಥ ರೂಢಿಗತಿಯ ಪ್ರತಿ ಈತ 7
ಮಾಯದ ದೈತ್ಯರ ಕೊಂದು ಮಲಗಬೇಕೆಂದು
ಬಂದು ಹಯಗ್ರೀವರಾಯ ನಿಂದು ಹರುಷವ ತಾಳ್ದನೆಂದು 8
ಮುಂದೆ ದೇವಾಂಗನೆಯರು ಮುಖಸುತ್ತ ಮುಕ್ತಿಸುರ
ವೃಂದದ ಮಧ್ಯದೊಳರವಿಂದಾಕ್ಷಿ ಪೊಳವುತ್ತಿರೆ 9
ಒಪ್ಪುವ ತಾಳಗಳೊಪ್ಪೆ ಒರಗಿಪ್ಪ ದೇವನುತ 10
ಮಾನ್ಯ ಶ್ರೀ ಹಯವದನ್ನ ಮನದ ಮಧುಸೂದನ್ನ
ಎನುತ ತೂಗುವ ಜನ ಎಂದೆಂದು ಭಕ್ತಮೋದನ11