ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ
ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1
ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2
ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3
ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4
ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5
ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6
ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7
ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8