ಮಾನವ ಸಿಂಗನ ಪಾಡಿರೈ ಪ
ಇಂಗಡಲಜೆಪತಿ | ಮಂಗಳ ಚರಿತ ಭು
ಜಂಗಶಾಯಿ ಶುಭಾಂಗ ಅ.ಪ
ಲಾಲಿಸಿ ದೇವ | ಮಹಾನುಭಾವ |
ಅವತರಿಸಿದನು ಅಸುರಾಂತಕ |
ಪ್ರೇಮದಲಿ ಗೋಕುಲದಲ್ಲಿ |
ವಿಧಿ ಕುಲ ಜಾತ 1
ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ |
ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು
ಮದವನು ಮುರಿದ | ಮೋದವಗರೆವ
ಕರವ | ಕರುಣದಿ ಪಿಡಿವ 2
ಶ್ವೇತ ವಾಹನ ಸೂತ
ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ
ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ
ಹೇಮಾಂಬರಧರ ಶಾಮಸುಂದರ ವಿಠಲ | ಧೃತವನಮಾಲ3