ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳನಾಗಿ ಬಂದು ತೀರ್ಥಪುರಕೆ ಸೇರಿದೆ ಕರಸಿಕೊಳ್ಳೊ ಮನೆಗೆ ಬೇಗ ಕರುಣವಾರಿಧೆ ಪ. ಸರಸಿಜಾದಿ ವಂದ್ಯ ನಿನ್ನ ಚರಣಕಮಲವ ಮರಳಿ ಮರಳಿ ಬೇಡಿಕೊಳುತ ಮಹಿಮೆ ಕೇಳುತ ಸ್ವರಗಳಿಂದ ಪೊಗಳುತಿರುವ ಸುಖವ ತ್ಯಜಿಸುತ 1 ಮೂಲೆ ನಾಲ್ಕರಲ್ಲಿ ಪುಷ್ಪಮಾಲೆಯಿರಿಸುತ ಮೇಲುಗಟ್ಟು ಬಿಗಿದು ದೀಪಮಾಲೆ ಬೆಳಗುತ ಗಾಳಿದೇವನೆಂದ ತತ್ವಮೂಲ ತಿಳಿವುತ ಶ್ರೀಲಲಾಮ ನಿನ್ನ ಪೂಜೆ ಮಾಡದೇಳುತ 2 ಇಂದಿರೇಶ ಎನ್ನ ತಪ್ಪನೊಂದ ನೋಡದೆ ತಂದೆ ಎನ್ನ ಕರಸಿಕೊಳ್ಳೊ ಹಿಂದೆ ದೂಡದೆ ಚಂದನ ಸ್ವರೂಪ ಪರಾನಂದ ಕಾರಣಾ ಭುಜಗ ಗಿರೀಶ ಭಕ್ತಭೂಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ