ಪ್ರಾಣದೇವನ ನಮಿಪೆ ನಮೋ
ಪ್ರಾಣಕಧೀಶನೆ ಶರಣು ನಮೋ
ಕಾಣಿಸು ಹರಿಯಂಘ್ರಿಯನು ನಮೋ
ಪ್ರಾಣ ಪಂಚÀರೂಪಾತ್ಮ ನಮೋ ಪ.
ಅಂಜನೆ ಆತ್ಮಜ ಕುವರ ನಮೋ
ಸಂಜೀವನ ಗಿರಿ ತಂದೆ ನಮೋ
ನಂಜುಂಡನ ಪ್ರಿಯ ಜನಕ ನಮೋ
ಕಂಜಾಕ್ಷನ ದಾಸಾರ್ಯ ನಮೊ1
ಆಪ್ತವರ್ಗ ನಿರ್ಧೂತ ನಮೋ
ಶಕ್ತ ಜರಾದಿ ಹಂತ ನಮೋ
ತಪ್ತಕಾಂಚನ ಸುದೀಪ್ತ ನಮೊ 2
ಏಕವಿಂಶತಿ ಮತಧ್ವಂಸ ನಮೋ
ಶ್ರೀಕಳತ್ರಪ್ರಿಯ ಪಾತ್ರ ನಮೋ
ಏಕ ಚತುರ ನವಗ್ರಂಥ ನಮೋ
ಜೋಕೆಯಿಂದ ನಿರ್ಮಿಸಿದೆ ನಮೋ 3
ಮುಕ್ತ ಜೀವರ ಸ್ತುತ್ಯ ನಮೋ
ಯುಕ್ತಿವಂತ ಜಗದ್ವ್ಯಾಪ್ತ ನಮೋ
ಶಕ್ತಿವಂತ ಶುದ್ಧಾತ್ಮ ನಮೋ
ಭಕ್ತಭರಿತ ಹರಿಪ್ರೀತ ನಮೋ 4
ನಮೋ ನಮೋ ಶ್ರೀಗೋಪಾಲ
ಕೃಷ್ಣವಿಠ್ಠಲನಿಗೆ ಪ್ರಿಯಬಾಲ
ನಮೋ ನಮೋ ಶ್ರೀ ಭಾರತಿಲೋಲ
ನಮಿಸುವೆ ಚಳ್ಳಕೆರೆಯ ಪಾಲ 5