ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ
ಮಂದಾಕಿನೀಪಾದ ಗೋಪೀಜನಾನಂದ
ನಂದಾತ್ಮ ಗೋವಿಂದ ಬಾ ಅ.ಪ
ನಂದನ ವನದಲ್ಲಿ ಬೆಳೆದ ಮಂದಾರಾ
ಸುಂದರಿಯ ತಲೆಯ ಜಡೆಯ ಬಂಗಾರ
ಮಂದಮಾರುತನಿಂದ ನಲಿವು ಶೃಂಗಾರ
ಸಾರ 1
ಕತ್ತಲೆಯಲಿ ಹೊಳೆವ ರನ್ನದ ದೀಪ
ಮತ್ತಗಾಮಿನಿಯರ ಸರಸ ಸಲ್ಲಾಪ
ಎತ್ತೆತ್ತ ಸಡಗರ ಸೊಗದ ಪ್ರತಾಪ
ತಾಪ 2
ಗೋಪಾಲ ಘನಲೀಲ ಬಾ ಮುರಹರ
ತಾಪತ್ರಯಕಾಲ ಬಾ ಪರಂಧಾಮ
ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ3