ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಪಾಲಧರ ತ್ರಯತಾಪರಿಹಾರ ಭ ಜಿಪೆ ಕಾಪಾಡು ಕೃಪೆ ಪಾಲಿಸಿ ಪ ಅಪಾರ ಪತಿವ್ರತಾಶಾಪವಿಮೋಚನ ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ ಅಗಜಾವಲ್ಲಭ ಸುಗುಣರಘದೂರ ಜಗದೊಡೆಯ ಮಗುವಿನ ಮೊರೆ ಪಾಲಿಸು ವಿನುತ ಅಗಣಿತಾಗಣಿತಮಹಿಮೆ ಬಗೆದೆನ್ನ ನುಡಿಯಾಲಿಸು ನಗಧರ ಖಗರೂಢ ಜಗರಕ್ಷ ಹರಿನಾಮ ಅಗಣಿತ ಮತಿ ನೀಡೊ 1 ಅಜಭವಸುರ ನಮಿತ ರಜತಾದ್ರಿಮಂದಿರ ನಿಜಜ್ಞಾನ ದಯಮಾಡೊ ಮೃಡ ಗಜಚರ್ಮಾಂಬರ ಜಗದ ಗೋಜು ಮುಂದೆನಗೆ ಬೇಡೊ ಸುಜನ ಸಂರಕ್ಷಕ ಪಾದ ನಿಜಧ್ಯಾನ ಸ್ಥಿರಕೊಡೋ 2 ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ ನಿತ್ಯ ಸತ್ಯರ ಸಖ್ಯ ನೀಡೊ ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ ಚಿತ್ತ ಪರಿಶುದ್ಧ ಮಾಡೊ ಭಕ್ತವತ್ಸಲ ನಿಜಮುಕ್ತಿದಾಯಕ ಮಮ ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ 3
--------------
ರಾಮದಾಸರು
ಶೌರಿ ಸುರಸೇವ್ಯ ಸುಜನಾತ್ಮ ಸತ್ಯ ಆನಂದ ತವಸೇವೆ ನೀಡೆನಗೆ ಪ ಕೊಡು ಎನ್ನ ಕರ್ಣಕ್ಕೆ ದೃಢಮಾಡು ವಚಶ್ರವಣ ಬಿಡದೆನ್ನ ನಯನಕ್ಕೆ ಇಡು ನಿನ್ನ ದರ್ಶನವ ನುಡಿಸೆನ್ನ ವದನದಿಂ ಕಡು ಸತ್ಯವಚನವನು ಎಡಬಿಡದೆ ಜಿಹ್ವೆಕ್ಕೆ ನೀಡು ತವಧ್ಯಾನ 1 ಒದಗಿಸೈ ಕೈಗೆ ತವಪಾದಪದುಮ ಸೇವಾ ಹೃದಯಕ್ಕೆ ಕರುಣಿಸು ಸದಮಲ ಸುಶಾಂತಿ ಸದಯಾತ್ರ ನೀಡೆನ್ನ ಪಾದಕ್ಕೆ ಪುಣ್ಯಸ್ಥಳ ವಿಧವಿಧದಿ ಬೇಡ್ವೆ ನೀನು ದಯನಾಗೆನ್ನೊಳಗೆ 2 ಚಿತ್ತಕ್ಕೆ ಸ್ಥಿರನೀಡು ಸ್ವಸ್ಥತೆ ಕೊಡು ಮನಕೆ ಸತ್ಯರಿಗೆ ಮಣಿಸೆನ್ನ ಮಸ್ತಕವ ಸತತ ನಿತ್ಯ ಪರಿಪೂರ್ಣ ಮಮ ಕರ್ತ ಶ್ರೀರಾಮ ನಿನ್ನ ಭಕ್ತನೆಂದೆನಿಸೆನ್ನ ಮುಕ್ತಿ ಪಥಕ್ಹಚ್ಚು 3
--------------
ರಾಮದಾಸರು