ಭಜಿಪ ಭಕ್ತರ ಭಾವ ಪರಿಪೂರ್ಣ ಬಾಗಿ
ಭಜಿಸುವೆ ಬಾರೊ ದಯಾಸದನ ಪ
ಪಾದಸೇವೆಯ ಕರುಣಿಸಿ ಪರ
ಸಾಧನದ ಮಹದ್ಹಾದಿ ತೋರಿಸಿ
ಬಾಧಿಸುವ ಭವಬಾಧೆ ತೊಲಗಿಸಿ
ವೇದವಿದ್ಯವ ಬೋಧಿಸಭವ 1
ನಿತ್ಯ ನಿಮ್ಮ
ಗುರ್ತುತೋರಿಪ ತತ್ವದರ್ಥವ
ತುರ್ತುಪಾಲಿಸು ಕರ್ತುವೇದ 2
ಭಕ್ತವತ್ಸಲನೆಂಬ ಬಿರುದು
ಸತ್ಯವಾಗಿ ಹೊತ್ತುಕೊಂಡಿಹಿ
ಭಕ್ತನಿಷ್ಟವ ಚಿತ್ತೈಸೊಡನೆ
ಮುಕ್ತಿಪದ ನೀಡಾತ್ಮರಾಮ 3