ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮ ಪ ತನುವಿದು ನೋಡಲು ಮೊದಲೆಲ್ಲಿತ್ತು |ತನುವಿಗೆ ತಗಲದೆ ಬಂದಿಯಾ ಹೊತ್ತು 1 ಅನುದಿನ ವೇದಾ |ಅದರೊಳು ಹೇಳಿತ್ತೇ ? ಜೀವ ಶಿವ ಭೇದಾ 2 ಗುರು ಭವತಾರಕ ಭಕ್ತನಾದರೆ |ಆಗುವಿ ನೀ ಜೀವನ್ಮುಕ್ತಾ 3
--------------
ಭಾವತರಕರು
ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ