ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವಾದಿರಾಜರ ಪ್ರಾರ್ಥನೆ) ಭಾವಿಭಾರತಿವರನೆ ದಾಸನ ಬೇಗ ಕಾವ ಕಲುಷಹರನೆ ದೇವ ಋಜು ಗಣನಾಥನೀಪರಿ ಸಾವಕಾಶಕೆ ಸಮಯವಲ್ಲಿದು ಪ. ಅರಿಷಡ್ವರ್ಗದಿ ಸಿಲುಕಿ ಕ್ಷಣಕ್ಷಣ ಕರಗಿ ಕುಂದುತ ಬಂದೆನು ನಾನಾ ಪರಿಯ ಕ್ಲೇಶದಿ ನೊಂದೆನು ಮುಂದೇನು ದುರಿತಾರಾಶಿಗಳನ್ನು ಬೇಗದಿ ತರಿದು ಸಜ್ಜನಗುಣವ ಸುಲಭದಿ ಪೊರೆದನೆಂಬೈತಿಹ್ಯ ವಚನದಿ ಭರವಸದಿ ನಂಬಿರುವೆ ನಿನ್ನನು 1 ತುರಗ ವದನ ದೇವನ ವಲಿಸಿ ದೇವ ನರವರ ಸಂಘವನು ಕರದು ತಂಪೇರಿಸಿ ಸರಿಯೆನಿಸಿದನೆ ಹರಿಯೆ ತಾನೆಂದೊದರಿಕೊಂಡಿಹ ನರಕಭಾಜಿಗಳಾದ ಮೈಗಳ- ನರಿದು ವಾದದಿ ಮುರಿದು ಹಲ್ಲನು ಸಿರಿವರನ ಸತ್ಕರಿಸಿ ಪೂಜಿಪ2 ವನಜಾಕ್ಷ ರಾಮಭಕ್ತನಾಗಿಹ ವಿಭೀಷಣಗೆ ಮಾರುತಿಯಿಂದುತ್ತ- ಮುಂದಿನ ಫಲ ನೀಡೆಂದು ಮಣಿದು ಬೇಡುವೆ ನಿನ್ನ ಪದಯುಗ ವನರುಹಗಳನುವಶ್ಯದಾಯಕ ನಿತ್ಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಧನ್ಯನಾದೆನಯ್ಯ ನಾನು ಧನ್ಯನಾದೆನುಅನ್ಯಮಾರ್ಗವನುಳಿದು ನಿನ್ನ ಭಕ್ತ ಭಕ್ತನಾಗಿ ಪನಿನ್ನ ಮೂರುತಿಯ ನೋಡಿ ನಿನ್ನ ಗುಣವ ಕೊಂಡಾಡಿನಿನ್ನ ನಾಮಗಳ ಪಾಡಿ ನಿನ್ನ ಮುಂದೆ ಕುಣಿದಾಡಿ 1ಆವ ಜನ್ಮಾರ್ಜಿತ ಪುಣ್ಯ ತಾವೊದಗಿತೊ ನಾ ಕಾಣೆನೀವೊಲಿದರೆ ದುರ್ಲಭ ವಾವುದೀ ಮೂರು ಲೋಕದಿ 2ತಿರುಪತಿ ಕ್ಷೇತ್ರಾಧಿವಾಸ ಪರಮಪುರುಷ ವೆಂಕಟೇಶಗುರು ವಾಸುದೇವಾರ್ಯ ವೇಷ ಮರೆಯೊಕ್ಕೆ ನಾ ನಿನ್ನ ದಾಸ 3ಓಂ ಭೀಷ್ಮ ಮುಕ್ತಿಪ್ರದಾಯಕಾಯ ನಮಃ
--------------
ತಿಮ್ಮಪ್ಪದಾಸರು
ಭಕ್ತನ್ನ ಮಾಡಿಕೊ ಎನ್ನಾ ನಿಜ ಭಕ್ತನಾಗಿ ನಿನ್ನ ಭಕ್ತನ್ನ ಮಾಡಿಕೋ ಎನ್ನಾ ಪ ಸಾರೆ ಕೀಚಕ ಬೇಡ ಓಡಿ ಅದು [?] ಪಾರಿ ಸಿಡಿವ ಪರಿಜಾಲದಿ ಕೂಡಿ ಆಡು ಆಗದೆನ್ನ ಕಾಡಿ ಮತ್ತೆ ಮೂರು ಮಡುವಿನೊಳು ನೋಳ್ಪರು ದೂಡಿ ಭಕ್ತನ್ನಾ 1 ಘೃತ ಭಾಂಡವಿರೆ ನೊಣ ನೋಡಿ ಅಲ್ಲಿ ಪರಿ ಭರದಿ ಈಸಾಡಿ ಸತಿಸುತಯುತ ಭವನೋಡಿ ಅಲ್ಲಿ ಮತಿಗೆಟ್ಟು ಮೋಹಿಸಿ ಬಿದ್ದೆನೊದ್ದಾಡಿ 2 ಉರಿಯ ಕಾಣಲು ಶಿಶು ಐದಿ ತಾ ಭರದಿಯದರ ಪರಿಯರಿವೋಲುನೊಯ್ದು ಅರಿದೆ ವಿಷಯದುರಿ ಮೈಯ್ದು ಇನ್ನು ನರಸಿಂಹ ವಿಠ್ಠಲ ನೀನೇ ಗತಿಯೆಂದೆ ಭಕ್ತನ್ನ 3
--------------
ನರಸಿಂಹವಿಠಲರು
ಭವದ ಬಂಧವಿನ್ನೆನಗೆ ಯಾಕೆ ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ ದುರಿತ ಭೀತಿ ಯಾಕೆ ಎನಗೆ ಕರ್ಮದ ಲೇಪವ್ಯಾಕೆ ಎನಗೆ ಕುಲ ಚಲಗಳ್ಯಾಕೆ ಎನಗೆ ಮಡಿಯು ಮೈಲಿಗ್ಯಾಕೆ ಅನುದಿನದಿ ಪಾವನಾತ್ಮಕನ ನೆನವು ಎನ್ನ ಮನದೊಳಿರಲು 1 ನಷ್ಟ ಪ್ರಪಂಚಂಟಿನ್ನ್ಯಾತಹೆÉ ಬಿಟ್ಟ ಬಡತನ ತಂತಿನಗ್ಯಾಕೆ ಹುಟ್ಟು ಸಾವು ಕಷ್ಟ ಮತ್ತ್ಯಾಕೆ ಕೆಟ್ಟ ಯಮನ ಅಂಜಿಕಿನ್ನ್ಯಾಕೆ ಸೃಷ್ಟಿ ಕರ್ತನ ಶಿಷ್ಟಪಾದ ನಿಷ್ಠೆಯೆನ್ನೊಳು ಗಟ್ಟಿಯಿರಲು 2 ನಿತ್ಯ ನೇಮ ಪೂಜೆ ಯಾಕೊ ಮತ್ತೆ ಜಪ ತಪವು ಯಾಕೊ ನಿತ್ಯ ನಿರ್ಮಲಾನಂದ ರೂಪಿ ಸತ್ತು ಚಿತ್ತನಂದದಾತ ಮುಕ್ತಿದಾಯಕ ಶ್ರೀರಾಮ ಪಾದ ಭಕ್ತನಾಗಿ ನಾ ಮೆರೆಯುತಿರಲು 3
--------------
ರಾಮದಾಸರು
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ ಸದ್ಭೋಧಸಾರ ಗರವಾ ಗರವಾಮೃತಾದಾ ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ 1 ಗುರುಪಾದ ಕಾಣದನಕಾದನ ಕಾವನಾಗೀ ಮರದೆನ್ನ ತನ್ನದೆನುತಾದೆನುತಾಂನರಾಗಿ ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ ಪರಮಾರ್ಥವಸ್ತು ವರ ದೇವರ ದೇಶಸಾರಿ 2 ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ ಇಂದು 3 ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ ದೊರವನು ಹೃತ್ಕಮಲದಾಮಲದಾತ್ಮ ಈಶಾ ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು4 ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ ನೆರೆಗಂಗಿ ಪಾದತೀರ್ಥತೀರಥಾಧರಾಶಿ ಗುರು ವಿಶ್ವನಾಥನೆನುವಾನೆನುವಾವನೆಲ್ಲಿ ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ5 ಕಾಣದೆ ಕಂಗಳಲಿತಾ ಲಲಿತಾದ ನೋಟಾ ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ ಪ್ರಾಣವಕಾವ ಗುರುವೀ ಗುರುವೀನ ಪಾಡಿ 6 ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ ತನುಭಾವವನ್ನು ಮರಸೀ ಮೆರಸೀದನೆಂದು ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು 7 ಗುರುಮೂರ್ತಿಗೆಂದನರನೇ ನರನೇವನವನು ಗುರುಭಕ್ತಿ ಗಳ್ಳಕುಶಲಾಕುಶಲಾದವನು ಗುರುನಾಮ ಕೂಗದವನೈದುವನೇ ಗತಿಯಾ ಗುರುಪಾದಪೂಜಿಮರತಾ ಮರತಾವನೀಯಾ 8 ಗುರುಅಷ್ಟಕದ ಮಹಿಮಾ ಮಹಿಮಗೇಬಲಾ ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ ಗುರು ಮಹೀಪತಿ ಕರುಣಾ ಕರುಣ ನುಪಾಡೀ ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು