ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು ವರ ಮಂತ್ರಾಲಯದೊಳಿರುವುದುಚಿತವೇನೋ ಪ ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ ದಡದಿನಿಂತೆನ್ನ ಕೈ ಬಿಡುವುದುಚಿತವೇನೋ 1 ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ 2 ಒಡೆಯ ಶ್ರೀ ಹನುಮೇಶವಿಠಲನ ದಾಸನೇ ಬಡವನಿರುವೆನೆಂದು ನೋಡದಿರುವರೇನೊ 3
--------------
ಹನುಮೇಶವಿಠಲ
ಭವ ನೋವಾ ಪ ಹರಿಯೆ ಪರದೈವ ವೆಂ | ಮೊರೆಯುತಿಹ ಬಾಲಕನಪರಿ ಪರೀ ಹಿಂಸಿಸಲು | ಪರಿಚರರಿಗ್ವೊರೆಯೇತರಳ ಪ್ರಹ್ಲಾದವನ | ಕರದೊಯ್ದು ಕಬ್ಬಿಯಲಿಹೊರದೂಡಿ ಪರಿಶಿಲೆಯ | ಶಿರದ ಮೇಲಿಡಲೂ 1 ವರಹ ಲಕ್ಷ್ಮೀನರ | ಹರಿಯ ರೂಪದಲಿಂದಭಾರವಾದ್ ಶಿಲೆಯ ನೊ | ತ್ತರಿಸುತಲಿ ನೀನೂವರ ಭಕ್ತನನು ಕಾಯ್ದೆ | ಸರುವ ವ್ಯಾಪಕ ದೇವಕರುಣಿಸು ಗುಣಾನಂತ | ವರಲಕ್ಷ್ಮಿಕಾಂತ 2 ಪರಿ ಪರಿಯ ಹಿಂಸೆಗಳಿಗೆರವು ಮಾಡುವೆ ಗುರೂ | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ